ಗುಜರಾತ್ ರಾಜ್ಯಸಭೆಗೆ ಎಂಟ್ರಿ ಕೊಡಲು ಅಮಿತ್ ಶಾ ರೆಡಿ : ನಾಮಪತ್ರ ಸಲ್ಲಿಕೆ

ದೆಹಲಿ : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಗುಜರಾತ್ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಅಮಿತ್ ಶಾ ಅವರೊಂದಿಗೆ ಸ್ಮೃತಿ ಇರಾನಿ ಹಾಗೂ ಬಲವಂತ್‌ ಸಿಂಗ್‌ ರಜಪೂತ್‌ ಸಹ ನಾಮಪತ್ರ ಸಲ್ಲಿಸಿದ್ದಾರೆ.

ಗುಜರಾತ್‌ನಲ್ಲಿ ಶಾಸಕರಾಗಿರುವ ಶಾ ಮೊದಲ ಬಾರಿಗೆ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಉತ್ತಮ ಸಂಖ್ಯಾಬಲ ಹೊಂದಿರುವ ಕಾರಣ ಅಮಿತ್‌ ಶಾ ಗೆಲುವು ಬಹುತೇಕ ಖಚಿತವಾದಂತಾಗಿದೆ.

ಗುಜರಾತ್‌ನ ಸರ್ಕೇಜ್‌ ಕ್ಷೇತ್ರದಿಂದ ಅಮಿತ್ ಶಾ ಸತತವಾಗಿ ನಾಲ್ಕು ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ಗುಜರಾತ್‌ನಿಂದಲೇ ರಾಜ್ಯ ಸಭೆಗೆ ಚುನಾಯಿತರಾಗಿದ್ದ ಸ್ಮತಿ ಇರಾನಿ ಅವರ ಅಧಿಕಾರಾವಧಿ ಇದೇ ಆಗಸ್ಟ್‌ 18ಕ್ಕೆ ಕೊನೆಗೊಳ್ಳಲಿದ್ದು, ಮತ್ತೆ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ..

 

Comments are closed.

Social Media Auto Publish Powered By : XYZScripts.com