Ind vs SL 1st test stat : ಟೀಮ್ ಇಂಡಿಯಾದ ಗಬ್ಬರ್​ ಈಸ್ ಬ್ಯಾಕ್ …

ಗಾಲೆ ಅಂಗಳದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್​ ಪಂದ್ಯದಲ್ಲಿ ಭಾರತ ಬೃಹತ್​ ಮೊತ್ತ ಕಲೆ ಹಾಕುವತ್ತ ದಾಪುಗಾಲು ಇಟ್ಟಿದೆ.. ಮೊದಲ ಟೆಸ್ಟ್​​ನ ಮೊದಲ ದಿನದ ಗೌರವ ಪ್ರವಾಸಿ ಕೊಹ್ಲಿ ಪಡೆಯ ಪಾಲಾಗಿದೆ..
10 ಟೆಸ್ಟ್​​ ಬಳಿಕ ಟೀಮ್​ ಸೇರಿದ ಶಿಖರ್​ ಧವನ್​
5ನೇ ಶತಕ ಬಾರಿಸಿದ ಗಬ್ಬರ್​ ಸಿಂಗ್​
12ನೇ ಶತಕ ಬಾರಿಸಿದ ಚೇತೇಶ್ವರ್​ ಪೂಜಾರ
2 ಉಭಯ ಆಟಗಾರರು ಲಂಕಾ ವಿರುದ್ಧ ಬಾರಿಸಿದ ಶತಕದ ಸಂಖ್ಯೆ
399 ಲಂಕಾ ವಿರುದ್ಧ ದಾಖಲಾದ ಎರಡನೇ ಗರಿಷ್ಠ ರನ್​​
3 ಟೀಮ್​ ಇಂಡಿಯಾದ ಪರ ಇನಿಂಗ್ಸ್​​ ಆರಂಭಿಸಿದ ಇಬ್ಬರೂ ಎಡಗೈ ಓಪನರ್ಸ್​​ ಸಂಖ್ಯೆ
ಮೊದಲ ಟೆಸ್ಟ್​​ನಲ್ಲಿ ಅಬ್ಬರದ ಆಟವನ್ನು ನಡೆಸಿದ ಭಾರತದ ಸ್ಟಾರ್​ ಎಡಗೈ ಆಟಗಾರ ಶಿಖರ್​ ಧವನ್​ ಮಿಂಚಿನ ಪ್ರದರ್ಶನ ನೀಡಿದ್ರು.. 10 ಟೆಸ್ಟ್​​ ಪಂದ್ಯಗಳಿಂದ ದೂರ ಉಳಿದಿದ್ದ ಶಿಖರ್​ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ್ರು.. ರನ್​ಗಳನ್ನು ಕಲೆ ಹಾಕಿ ಲಂಕಾ ಬೌಲರ್​​ಗಳನ್ನು ದಂಡಿಸಿದ ಶಿಖರ್​, ರನ್​ ಶಿಖರ ಏರಿದ್ರು.. ಇವರ ಅಬ್ಬರದ ಆಟಕ್ಕೆ ಲಂಕಾ ಬ್ಯಾಟ್ಸ್​​ಮನ್​ಗಳು ಕಂಗಾಲಾದ್ರು.. ಶತಕವನ್ನು ಬಾರಿಸಿದ ಬಳಿಕ, ರುದ್ರಾವತಾರ ತಾಳಿದ ಶಿಖರ್​ ರನ್​ ರೇಟ್​​ ಏರಿಸುತ್ತಾ ಸಾಗಿದ್ರು.. ಏಕದಿನ ಶೈಲಿಯಲ್ಲಿ ಬ್ಯಾಟ್​ ಬೀಸಿದ ಶಿಖರ್​ ಧವನ್​​ ಲಂಕಾ ಬೌಲರ್​​ಗಳನ್ನು ಕಾಡಿದ್ರು… 168 ಎಸೆತಗಳಲ್ಲಿ 190 ರನ್​ ಬಾರಿಸಿ, ಚೊಚ್ಚಲ ದ್ವಿಶತಕದ ಆಸೆಯಿಂದ ವಂಚಿತರಾದ್ರು.. ಇನ್ನು ಧವನ್​​ ಎರಡನೇ ಅವಧಿಯಲ್ಲೇ 110 ರನ್​ ಬಾರಿಸಿ ದಾಖಲೆಯನ್ನು ಬರೆದ್ರು..
ಇನ್ನು ಟೆಸ್ಟ್​​​ನ ಕಲಾತ್ಮಕ ಆಟಗಾರ ಸ್ವರಾಷ್ಟ್ರದ ಚೇತೇಶ್ವರ್​ ಪೂಜಾರ, ಸೊಗಸಾದ ಇನಿಂಗ್ಸ್​​ ಕಟ್ಟಿದ್ರು.. ತಮ್ಮ ನೈಜ ರೀತಿಯ ಬ್ಯಾಟಿಂಗ್​ ನಡೆಸಿದ ಪೂಜಾರ ರನ್​ಗಳನ್ನು ತಾಳ್ಮೆಯಾಗಿ ಕಲೆಹಾಕಿದ್ರು.. ಆನ್​ ಸೈಡ್​ನಲ್ಲೇ ಹೆಚ್ಚಿನ ರನ್​ ಕದ್ದ ಮೂರನೇ ಕ್ರಮಾಂಕಿತ, ಲಂಕಾ ವಿರುದ್ಧ 2ನೇ ಶತಕ ಬಾರಿಸಿದ್ರು.. ಇದು ಪೂಜಾರ ವೃತ್ತಿ ಜೀವನದ 12ನೇ ಶತಕವಾಗಿದೆ.. ಚೇತೇಶ್ವರ್​ ಪೂಜಾರ 247 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ 144 ರನ್​ ಬಾರಿಸಿದ್ರು ಅಜೇಯರಾಗಿ ಉಳಿದ್ದಿದ್ದಾರೆ..
ಲಂಕಾ ಆಟಗಾರರು ಬಿಟ್ಟ ಕ್ಯಾಚ್​ನ ಸಂಪೂರ್ಣ ಲಾಭ ಪಡೆದ ಆಟಗಾರರು ತಂಡದ ಪರ ದೊಡ್ಡ ಮೊತ್ತ ಕಲೆ ಹಾಕುವ ಕನಸಿನ ಬೀಜ ಬಿತ್ತಿದ್ದರು.. ಟೀಮ್​ ಇಂಡಿಯಾ ಮೊದಲ ದಿನ ಶ್ರೀಲಂಕಾ ವಿರುದ್ಧ ಕಲೆ ಹಾಕಿದ, ಎರಡನೇ ಗರಿಷ್ಠ ರನ್​ ಇದಾಗಿದೆ..

3 thoughts on “Ind vs SL 1st test stat : ಟೀಮ್ ಇಂಡಿಯಾದ ಗಬ್ಬರ್​ ಈಸ್ ಬ್ಯಾಕ್ …

 • October 16, 2017 at 4:46 PM
  Permalink

  You are my inhalation , I own few blogs and rarely run out from to post .

 • October 16, 2017 at 4:51 PM
  Permalink

  excellent points altogether, you simply received a new reader. What may you suggest in regards to your submit that you simply made a few days in the past? Any certain?

 • October 24, 2017 at 4:30 PM
  Permalink

  I’ve recently started a web site, the info you offer on this web site has helped me tremendously. Thank you for all of your time & work.

Comments are closed.

Social Media Auto Publish Powered By : XYZScripts.com