ಮೈಸೂರು : ಮಹಿಳೆಯರ ಪುನರ್ವಸತಿ ಕೇಂದ್ರಕ್ಕೆ ನುಗ್ಗಿ ಕುಡುಕನ ರಂಪಾಟ..

ಮೈಸೂರು: ಮಹಿಳೆಯರ ಪುನರ್ ವಸತಿ ಕೇಂದ್ರಕ್ಕೆ ನುಗ್ಗಿದ ಕುಡುಕನೊಬ್ಬ ರಂಪಾಟ ನಡೆಸಿದ್ದಾನೆ. ಮೈಸೂರಿನ ಹೊರ ವಲಯದ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯ ಗೇಟ್ ನ ಬೀಗ ಒಡೆದು ಕುಡುಕ ಮಹಾಶಯ ಒಳ ನುಗ್ಗಿದ್ದಾನೆ. ಒಡನಾಡಿ ಸೇವಾ ಸಂಸ್ಥೆಯ ಬಾಗಿಲಿನ ಗಾಜು ಪುಡಿ ಪುಡಿ ಮಾಡಿ ರಂಪಾಟ ಮಾಡಿದ್ದಾನೆ. ಪುನರ್ ವಸತಿ ಕೇಂದ್ರದಲ್ಲಿರುವ ಬಾಲಕಿಯರು, ಯುವತಿಯರ, ಮುಂದೆಯೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.

 

 

ಮಂಚೇಗೌಡನಕೊಪ್ಪಲು ನಿವಾಸಿ ಬಾಲಕೃಷ್ಣ (೫೪) ಮಹಿಳೆಯರ ಪುನರ್ವಸತಿ ಕೇಂದ್ರಕ್ಕೆ ನುಗ್ಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತನ ಪತ್ನಿ ಒಡನಾಡಿ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದರು. ಪತ್ನಿಗೆ ಆಶ್ರಯ ನೀಡಿದ್ದಕ್ಕೆ ಸಂಸ್ಥೆಯ ವಿರುದ್ಧ ಬಾಲಕೃಷ್ಣ ಕುಪಿತನಾಗಿದ್ದ. ಪತ್ನಿಯನ್ನು ತನ್ನ ಜೊತೆ ಕಳುಹಿಸುವಂತೆ ಇಂದು ನಸುಕಿ‌ನಲ್ಲಿ ಸಂಸ್ಥೆಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.

Social Media Auto Publish Powered By : XYZScripts.com