ಬಹುಅಂಗ ವೈಫಲ್ಯದಿಂದ ಶಾಸಕ ವರ್ತೂರು ಪ್ರಕಾಶ್ ಪತ್ನಿ ನಿಧನ

ಬೆಂಗಳೂರು : ಕೋಲಾರ ಶಾಸಕ ವರ್ತೂರು ಪ್ರಕಾಶ್ ಪತ್ನಿ ಎಮ್.ಎಸ್ ಶ್ಯಾಮಲಾ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಡೆಂಗ್ಯೂ ಕಾಯಿಲೆಯ ಚಿಕಿತ್ಸೆಗಾಗಿ ಬೆಂಗಳೂರಿನ ಎಮ್.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಬಹುಅಂಗಗಳ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಶ್ಯಾಮಲಾ ಅವರಿಗೆ ಡಯಾಬಿಟೀಸ್ ಇದ್ದು, ಕಿಡ್ನಿ ವೈಫಲ್ಯ ಕೂಡ ಉಂಟಾಗಿತ್ತು. ಎರಡು ದಿನಗಳಿಂದ ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿದ್ದರು.

Comments are closed.