India Vs Srilanka test : ಗಾಲೆಯಲ್ಲಿ ಭಾರತಕ್ಕೆ ಶ್ರೀಲಂಕಾದ ಮೊದಲ ಸವಾಲ…

ಗಾಲೆಯಲ್ಲಿ ಇಂದು ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.. ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಶ್ರೇಯಾಂಕವನ್ನು ಭದ್ರವಾಗಿ ಉಳಿಸಿಕೊಳ್ಳಲು ಈ ಸರಣಿಯಲ್ಲಿ ಗೆಲುವು ಅನಿವಾರ್ಯ..
ಕಳೆದ ಬಾರಿ ಲಂಕಾ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ್ದ ಕೊಹ್ಲಿ ಪಡೆ ಮತ್ತೊಮ್ಮೆ, ಸರಣಿ ಗೆಲುವಿನ ಕನಸು ಕಾಣುತ್ತಿದೆ.. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಸ್ಟ್ರಾಂಗ್ ಇದೆ.. ಇನ್ನು ಲಂಕಾ ತಂಡವನ್ನು ಪರಿಗಣಿಸುವಂತಿಲ್ಲ.. ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯನ್ನು ಸೋತು ಮುಖಭಂಗ ಅನುಭವಿಸಿದ್ದ ಆತಿಥೇಯ ಶ್ರೀಲಂಕಾ ತಂಡ, ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ..
ಕೊಹ್ಲಿ ಪಡೆಯ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ.. ಆದ್ರೆ ಆರಂಭಿಕ ಕನ್ನಡಿಗ ಕೆ.ಎಲ್ ರಾಹುಲ್ ಅವರು ಜ್ವರದಿಂದ ಬಳಲುತ್ತಿದ್ದು, ಆರಂಭಿಕರಾಗಿ ಯಾರು ಕಣಕ್ಕೆ ಇಳಿಯುತ್ತಾರೆ ಎಂಬ ತಲೆ ನೋವು ತಂಡದ ಚಿಂತೆ ಹೆಚ್ಚಿಸಿದೆ. ತಂಡಕ್ಕೆ ಕಮ್ ಬ್ಯಾಕ್ ಮಾಡಿರುವ ರೋಹಿತ್ ಶರ್ಮಾ ಅವರು ಆರಂಭೀಕರಾಗಿ ಕಣಕ್ಕೆ ಇಳಿಯುತ್ತಾರೋ ಎಂಬ ಪ್ರಶ್ನೆ ಎದ್ದಿದೆ.. ಇನ್ನು ಮಧ್ಯಮ ಕ್ರಮಾಂಕಕ್ಕೆ ತಂಡಕ್ಕೆ ಆಧಾರವಾಗಿರುವ ಅಜಿಂಕ್ಯ ರಹಾನೆ ಆರಂಭಿಕರಾಗಿ ಕಣಕ್ಕೆ ಇಳಿದ್ರೂ ಅಚ್ಚರಿಯಿಲ್ಲ…
ಇನ್ನು ಶಿಖರ್ ಧವನ್ ಆರಂಭಿಕರಾಗಿ ಮಿಂಚಲು ತಯಾರಿ ನಡೆಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಟೆಸ್ಟ್ ಸ್ಪೇಷಲಿಸ್ಟ್ ಚೇತೇಶ್ವರ್ ಪೂಜರ್ ದೊಡ್ಡ ಇನಿಂಗ್ಸ್ ಕಟ್ಟಬಲ್ಲರು. ವಿಕೆಟ್ ಕೀಪರ್ ವೃದ್ಧಿಮನ್ ಸಹ ರನ್‌ಗಳನ್ನು ಹೆಚ್ಚಿಸಬಲ್ಲರು..
ಆರ್.ಅಶ್ವಿನ್, ಜಡೇಜಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್ ತಂಡದಲ್ಲಿ ಸ್ಥಾನ ಪಡೆಯಬಲ್ಲರು.. ಇನ್ನು ಐದನೇ ಬೌಲರ್ ಆಗಿ ಯಾರು ಕಣಕ್ಕೆ ಇಳಿಯುತ್ತಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ..
ಶ್ರೀಲಂಕಾ ತಂಡದ ನಾಯಕ ದಿನೇಶ್ ಚಂಡೀಮಲ್ ಗಾಯಕ್ಕೆ ತುತ್ತಾಗಿರುವ ದಿನೇಶ್ ಚಂಡೀಮಲ್ ಅನುಪಸ್ಥಿತಿಯಲ್ಲಿ ಎಡಗೈ ಆಟಗಾರ, ರಂಗಣಾ ಹೆರತ್ ತಂಡವನ್ನು ಮುನ್ನಡೆಸಲಿದ್ದಾರೆ.. ಲಂಕಾ ತಂಡ ಭಾರತದ ವಿರುದ್ಧ ಭರ್ಜರಿ ಪ್ರದರ್ಶನವನ್ನು ನೀಡುವ ವಿಶ್ವಾಸದಲ್ಲಿದೆ..

Comments are closed.

Social Media Auto Publish Powered By : XYZScripts.com