Cricket Ind vs Sl test : ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ ಗೆ ೫೦ನೇ ಟೆಸ್ಟ್ ಸಂಭ್ರಮ…

ಭಾರತ ತಂಡದ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ ಅವರಿಗೆ ಗಾಲೆ ಟೆಸ್ಟ್ ಮಹತ್ವದಾಗಿದೆ.. ಏಕೆಂದ್ರೆ ಅಶ್ವಿನ್ ಅವರಿಗೆ ಇದು ವೃತ್ತಿ ಜೀವನದ ೫೦ನೇ ಟೆಸ್ಟ್ ಪಂದ್ಯ ಆಗಿದೆ..
ಎಸ್.. ಏಷ್ಯಾ ಖಂಡದ ಪಿಚ್‌ಗಳ ಮೇಲೆ ಚೆಂಡನ್ನು ತಾನು ಹೇಳಿದಂತೆ ತಿರುಗಿಸಬಲ್ಲ ಖ್ಯಾತ ಸ್ಪಿನ್ ಬೌಲರ್ ಅಶ್ವಿನ್, ತವರಿನಲ್ಲಿ ನಡೆದ ಟೆಸ್ಟ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದ ಅಶ್ವಿನ್, ಮತ್ತೊಮ್ಮೆ ಲಂಕಾ ಪ್ರವಾಸದಲ್ಲಿ ಮಿಂಚಲು ತಯಾರಿ ನಡೆಸಿದ್ದಾರೆ..
ಅಶ್ವಿನ್ ಅವರು ಹೊಸ ಚೆಂಡಿನ ಮೂಲಕವು ಕಮಾಲ್ ಪ್ರದರ್ಶನ ನೀಡಬಲ್ಲ ಆಟಗಾರ. ಡೇಲ್ ಸ್ಟೇನ್ ಅವರನ್ನು ಹೊರತು ಪಡಿಸಿದ್ರೆ ಅಶ್ವಿನ್ ಅವರೇ ಹೆಚ್ಚು ವಿಕೆಟ್ ಪಡೆದಿರುವ ಸಾಧನೆ ಹೊಂದಿದ್ದಾರೆ.
ಇನ್ನು ಟೆಸ್ಟ್‌ನಲ್ಲಿ ವೇಗವಾಗಿ ೨೫೦ ವಿಕೆಟ್‌ಗಳನ್ನು ಪಡೆದ ವಿಶ್ವದ ಎರಡನೇ ಬೌಲರ್ ಎಂಬ ಶ್ರೇಯ ಸಹ ಅಶ್ವಿನ್ ಅವರದ್ದಾಗಿದೆ.. ವಿಕೆಟ್ ಮೆಲ ಚೆಂಡನ್ನು ಬುಗರಿಯಂತೆ ತಿರುಗಿಸಬಲ್ಲ ಕಲೆಯನ್ನು ಮೈಗೂಡಿಸಿಕೊಂಡಿರುವ ಅಶ್ವಿನ್, ಭಾರತ ಕಂಡ ಶ್ರೇಷ್ಠ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು..
ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಅಬ್ಬರದ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಲಿ ಎಂಬುದೇ ಅಭಿಮಾನಿಗಳ ಆಶಯ..

Comments are closed.

Social Media Auto Publish Powered By : XYZScripts.com