ಚೀನಾದ ಉದ್ಧಟತನ : ವಿವಾದಿತ ದಕ್ಷಿಣ ಚೀನಾ ಸಮುದ್ರ ದ್ವೀಪದಲ್ಲಿ ಚಿತ್ರ ಪ್ರದರ್ಶನಕ್ಕೆ ಸಿದ್ಧತೆ

ಬೀಜಿಂಗ್‌ : ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಹಿಡಿತ ಸಾಧಿಸಲು ಹೊರಟಿರುವ ಚೀನಾ ಅನೇಕ ರಾಷ್ಟ್ರಗಳ ಶತ್ರುತ್ವ ಕಟ್ಟಿಕೊಳ್ಳುತ್ತಿದೆ. ಈ ಮಧ್ಯೆ ಚೀನಾದ ಹೈನನ್‌ ಎಂಬ ಸಿನಿಮಾ ತಯಾರಕ ಕಂಪನಿ ದಕ್ಷಿಣ ಚೀನಾ ಸಮುದ್ರದ ಯೋಂಗ್‌ಕ್ಸಿಂಗ್‌ ದ್ವೀಪದಲ್ಲಿ ಸಿನಿಮಾ ಪ್ರದರ್ಶಿಸಲಿದ್ದು, 200 ಮಂದಿ ಸಿನಿಮಾ ನೋಡಲಿದ್ದಾರೆ ಎಂದು ಕ್ಸಿನ್ಹುವಾ ಪತ್ರಿಕೆ ವರದಿ ಮಾಡಿದೆ.

4ಕೆ ರೆಸಲ್ಯೂಷನ್‌ ಇರುವ 3ಡಿ ಅಪಡೇಟ್‌ ತಂತ್ರಜ್ಞಾನವನ್ನು ಬಳಸಿ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಇದು ದಕ್ಷಿಣ ಚೀನಾದ ಅತ್ಯುತ್ತಮ ಚಿತ್ರ ಎಂದು ಮಾಧ್ಯಮಗಳು ವರದಿ ಮಾಡಿವೆ.


ದಕ್ಷಿಣ ಚೀನಾ ಸಮುದ್ರ ಅನೇಕ ವರ್ಷಗಳಿಂದ ಭೌಗೊಳಿಕವಾಗಿ ವಿವಾದಕ್ಕೀಡಾಗಿದೆ. ಕಳೆದ ವರ್ಷ ದಕ್ಷಿಣ ಚೀನಾದ ಬಹುತೇಕ ಭಾಗ ತನ್ನದು ಎಂದು ಚೀನಾ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು. ಆದರೆ ನ್ಯಾಯಾಲಯ ಚೀನಾದ ವಾದವನ್ನು ತಿರಸ್ಕರಿಸಿತ್ತು. ಜೊತೆಗೆ ಅಮೆರಿಕ ಸಹ ಚೀನಾದ ನಡೆಯನ್ನು ಖಂಡಿಸಿತ್ತು. ಆದರೆ ಚೀನಾ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ದಕ್ಷಿಣ ಚೀನಾದ ಬಹುತೇಕ ಭಾಗ ತನ್ನದೆಂದು ಗುರುತಿಸಿಕೊಂಡಿದ್ದು, ತನ್ನ ಸೇನೆಯನ್ನು ನಿಯೋಜಿಸಿತ್ತು.
ಯೋಂಗ್ ಸ್ಕಿಂಗ್‌ ಪ್ರದೇಶದಲ್ಲಿರುವ ಜನರು ಹಾಗೂ ಸೈನಿಕರಿಗೆ ಪ್ರತಿನಿತ್ಯ ಒಂದಾದರೂ ಸಿನಿಮಾ ತೋರಿಸಬೇಕು. ಇದಕ್ಕಾಗಿ ಸ್ಥಳೀಯ ಅಧಿಕಾರಿಗಳು ಮೊಬೈಲ್ ಪ್ರೊಜೆಕ್ಷನ್‌  ಯುನಿಟ್‌ನ್ನು ಕೊಂಡುಕೊಂಡಿದ್ದಾರೆ. ಇದರಿಂದ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಸಿನಿಮಾಗಳನ್ನು ಒಯ್ಯಲು ಸಹಾಯವಾಗುತ್ತದೆ ಎಂದು ಹೈನನ್‌ ಮೀಡಿಯಾದ ಮ್ಯಾನೇಜರ್ ಗು ಕ್ಸಿಯಾಜಿಂಗ್‌ ಹೇಳಿದ್ದಾರೆ.

ಶನಿವಾರ ದ “”ಎಟರ್ನಿಟಿ ಆಫ್‌ ಜಿಯಾವೊ ಯುಲು ಹೆಸರಿನ ಸಿನಿಮಾ ಪ್ರದರ್ಶನವಾಗಲಿದೆ. ಸಾಕ್ಷ್ಯಚಿತ್ರ ರೂಪದಲ್ಲಿರುವ ಸಿನಿಮಾ ಚೀನಾದ ಕಮ್ಯುನಿಸ್ಟ್‌ ಪಕ್ಷದ ರಾಜಕೀಯ ನಾಯಕರ ಜೀವನದ ಕುರಿತಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Comments are closed.