ದಲಿತರು, ಅಲ್ಪಸಂಖ್ಯಾತರ ಪರ ಇರೋ ಸರ್ಕಾರ ಅಂದ್ರೆ ಕಾಂಗ್ರೆಸ್ ಮಾತ್ರ : ಸಿದ್ದರಾಮಯ್ಯ

ಬೆಂಗಳೂರು : ಮಂಗಳವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಸಿಎಂ ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

‘ ಬಿಜೆಪಿ ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಠಿ ಮಾಡುತ್ತಿದೆ. ಬಿಜೆಪಿ ಕತ್ತರಿ ಕಾಂಗ್ರೆಸ್ ಸೂಜಿ ಇದ್ದ ಹಾಗೆ. ಬಿಜೆಪಿ ಸಮಾಜವನ್ನು ಕತ್ತರಿಸುವ ಕೆಲಸ ಮಾಡಿದರೆ ನಾವು ಅದಕ್ಕೆ ಹೊಲಿಗೆ ಹಾಕಿ ಸೇರಿಸುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಜಾತಿ ಜಾತಿ, ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿ ಮಾಡ್ತಿದ್ದಾರೆ. ಬಿಜೆಪಿ ಕತ್ತಿ, ಅವರು ಕತ್ತರಿಸುತ್ತಾ ಹೋಗ್ತಾರೆ. ಕಾಂಗ್ರೆಸ್ ಸೂಜಿ ಅವರು ಕತ್ತರಿಸೋದನ್ನ ಹೊಲಿಯುತ್ತಿದ್ದೇವೆ ‘ ಎಂದು ಹೇಳಿದರು.

ಯಡಿಯೂರಪ್ಪ ವಿರುದ್ದ ಸಿಎಂ ವಾಗ್ದಾಳಿ ನಡೆಸಿ ‘ ಸಿಎಂ ಆಗಿದ್ದಾಗ ಪರಿಶಿಷ್ಠ ಜಾತಿ, ಪಂಗಡದವರಿಗೆ ಏನು ಮಾಡಿಲ್ಲ. ಈಗ ದಲಿತರ ಮನೆಗೆ ಹೋಗ್ತೀನಿ ಅಂತ ನಾಟಕ ಆಡ್ತಿದ್ದಾರೆ.ಹೋಟೇಲ್ ನಿಂದ ತಿಂಡಿ ತಂದು ತಿನ್ನುತ್ತಾರೆ‌. ಅವರ ಮನೆಯ ತಟ್ಟೆ ಕೂಡಾ ಮುಟ್ಟದೆ ಬಾಳೆ ಎಲೆಯಲ್ಲಿ ಊಟ ಮಾಡ್ತಾರೆ. ಅದಕ್ಕೆ ನಾನು‌ ಅವರ ಮಕ್ಕಳನ್ನ ಮದುವೆ ಮಾಡಿಕೊಳ್ಳಿ ಅಂದೆ. ಅದಕ್ಕೆ‌ ಯಡಿಯೂರಪ್ಪ ದಲಿತರ ಮನೆಗೆ ಹೋಗೆ ಬಿಟ್ಟರು. ಬಿಎಸ್ ವೈ ವಿರುದ್ದ  ಸಿಎಂ ಲೇವಡಿ ಮಾಡಿದ್ದಾರೆ. ಇವರದ್ದು ತೋರಿಕೆಯ ದಲಿತ ಪ್ರೇಮ. ದಲಿತರು, ಅಲ್ಪಸಂಖ್ಯಾತರ ಪರ ಇರೋ ಸರ್ಕಾರ ಅಂದ್ರೆ ಕಾಂಗ್ರೆಸ್ ಮಾತ್ರ’ ಎಂದರು.

 

ಸಿಎಂ, ‘ ಜೆಡಿಎಸ್ ನವರು ಅಧಿಕಾರಕ್ಕೆ ಬರುವುದಿಲ್ಲ ಅವರು ಅವಕಾಶವಾದಿಗಳು. ಡೋಂಗಿ ಜ್ಯಾತ್ಯಾತೀತ ವಾದಿಗಳನ್ನು ಯಾವುದೇ ಕಾರಣಕ್ಕೂ ಬೆಂಬಲಿಸ ಬಾರದು. ಜೆಡಿಎಸ್ ನವರನ್ನು ಬೆಂಬಲಿಸಿದರೆ ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿದಂತೆ ಆಗುತ್ತದೆ. ಆದ್ದರಿಂದ ಅಲ್ಪಸಂಖ್ಯಾತರು ಎಚ್ಚರದಿಂದ ಇರಬೇಕು ‘ ಎಂದರು.

 

ಜೆಡಿಎಸ್ ನದ್ದು ಡೋಂಗಿ ಜಾತ್ಯಾತೀತವಾದ, ಮುಂದಿನ ಚುನಾವಣೆಯಲ್ಲಿ  ಜೆಡಿಎಸ್ ಅಧಿಕಾರಕ್ಕೆ ಬರೊಲ್ಲ. ಅವರು ಅವಕಾಶವಾದಿಗಳು. ಜೆಡಿಎಸ್ ನದ್ದು ಯಾರಿಗೂ ಪೂರ್ಣ ಬಹುಮತ ಬರದಂತೆ ತಡೆಯೋದು ಪ್ಲಾನ್. ಆ ಮೂಲಕ ಅಧಿಕಾರ ಹಿಡಿಯೋ ಆಸೆ ಜೆಡಿಎಸ್ ಗೆ ಇದೆ. ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತ ಅಭಿವೃದ್ದಿ ಜೆಡಿಎಸ್ ಗೆ ಇಷ್ಟವಿಲ್ಲ. ಇಂತಹ ಪಕ್ಷಗಳನ್ನ ಬೆಂಬಲಿಸಬೇಡಿ. ಇಂತಹವರಿಗೆ ಮತಕೊಡಬೇಡಿ’  ಜೆಡಿಎಸ್ ಹಾಗೂ ಕುಮಾರಸ್ವಾಮಿ ವಿರುದ್ದ ಸಿಎಂ ವಾಗ್ದಾಳಿ ನಡೆಸಿದ್ದಾರೆ.

8 thoughts on “ದಲಿತರು, ಅಲ್ಪಸಂಖ್ಯಾತರ ಪರ ಇರೋ ಸರ್ಕಾರ ಅಂದ್ರೆ ಕಾಂಗ್ರೆಸ್ ಮಾತ್ರ : ಸಿದ್ದರಾಮಯ್ಯ

 • October 18, 2017 at 1:38 PM
  Permalink

  I think this is among the most important information for me. And i am glad reading your article. But should remark on few general things, The site style is perfect, the articles is really nice : D. Good job, cheers|

 • October 20, 2017 at 6:07 PM
  Permalink

  Good day! I could have sworn I’ve been to your blog before but after going through a few of the posts I realized it’s new to me. Anyways, I’m certainly happy I discovered it and I’ll be book-marking it and checking back often!|

 • October 20, 2017 at 11:59 PM
  Permalink

  I want to to thank you for this fantastic read!! I definitely loved every little bit of it. I have got you book marked to check out new stuff you post…|

 • October 21, 2017 at 12:02 AM
  Permalink

  Quality posts is the main to invite the viewers to pay
  a visit the website, that’s what this website is providing.

 • October 24, 2017 at 2:53 PM
  Permalink

  I think the admin of this site is truly working hard in favor of his web page, because
  here every stuff is quality based stuff.

 • October 25, 2017 at 10:11 AM
  Permalink

  Hello, Neat post. There’s a problem with your web site in internet explorer, could check
  this? IE nonetheless is the market chief and a good portion of
  folks will leave out your fantastic writing due to this problem.

Comments are closed.