ಹುಬ್ಬಳ್ಳಿ : ಕೇಂದ್ರ ಸರ್ಕಾರಿ ನೌಕರಿ ಆಮಿಷ ತೋರಿಸಿ ವಂಚಿಸಿದ ನಾಲ್ವರ ಬಂಧನ

ಹುಬ್ಬಳ್ಳಿ : ಕೇಂದ್ರ ಸರ್ಕಾರಿ ನೌಕರಿ ಆಮಿಷ ತೋರಿಸಿದ ನಾಲ್ವರು ವಂಚಕರನ್ನು ಹುಬ್ಬಳ್ಳಿಯಲ್ಲಿ ರೇಲ್ವೆ ಪೊಲೀಸರು ಬಂಧಿಸಿದ್ದಾರೆ‌. ಮೈಸೂರು ಮೂಲದ 10 ಯುವಕರಿಂದ ತಲಾ ಮೂರು ಲಕ್ಷ ರೂ. ಪಡೆದು ಹುಬ್ಬಳ್ಳಿಯಲ್ಲಿ ನಕಲಿ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದ ರೈಲ್ವೆ ನೌಕರ ಸೇರಿ ನಾಲ್ವರನ್ನು ರೈಲ್ವೆ ರಕ್ಷಣಾ ದಳ (ಆರ್‍ಪಿಎಫ್) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗದ ರೈಲ್ವೆ ವಾಣಿಜ್ಯ ಸಹಾಯಕ ಆನಂದ ಪಿ.ಎಸ್., ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಎಂಟೆಕ್ ಪದವೀಧರ ಮನೋಹರ ಎಸ್.ವಿ., ಚಾಮರಾಜನಗರದ ಸಚಿನ್ ಹಾಗೂ ಹುಬ್ಬಳ್ಳಿ ರೈಲ್ವೆ ಆಸ್ಪತ್ರೆ ಸಫಾಯಿ ಕರ್ಮಚಾರಿ ರಮೇಶ ಬಂಧಿತರು. ಮೈಸೂರು, ಹಾಸನ, ಸುಬ್ರಹ್ಮಣ್ಯ, ಚಾಮರಾಜನಗರ, ಉತ್ತರ ಕನ್ನಡ ಜಿಲ್ಲೆ ಮುರ್ಡೇಶ್ವರದ ಯುವಕ ಸೇರಿ 10 ಯುವಕರು ವಂಚನೆಗೀಡಾಗಿದ್ದಾರೆ.
ರೇಲ್ವೆ ಇಲಾಖೆಯಲ್ಲಿ ತನಗೆ ಮೇಲಧಿಕಾರಿಗಳು ಗೊತ್ತು, ನಿಮಗೆ `ಡಿ’ ದರ್ಜೆ ನೌಕರಿ ಕೊಡಿಸುತ್ತೇನೆ ಎಂದು ಆನಂದ ಯುವಕರನ್ನು ನಂಬಿಸಿದ್ದ. 2013 ರಲ್ಲೇ 10 ಯುವಕರಿಂದ ತಲಾ 3 ಲಕ್ಷ ರೂ.ನಂತೆ 30 ಲಕ್ಷ ಪಡೆದುಕೊಂಡಿದ್ದ. ನಂತರ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಸೇರಿದಂತೆ ಹಲವು ನಕಲಿ ಸಂದರ್ಶನ ಹಂತ ಪೂರೈಸಿ ಯುವಕರಲ್ಲಿ ನಂಬಿಕೆ ಬರುವಂತೆ ಮಾಡಿದ್ದ.

ಬೆಂಗಳೂರಿನಲ್ಲಿ ಎಂಟೆಕ್ ಪದವಿ ಪಡೆದಿರುವ ಮನೋಹರ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ಪ್ರವೇಶ ಪತ್ರ, ವೈದ್ಯಕೀಯ ಪತ್ರ, ಆರ್ಡರ್ ಕಾಪಿ ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆನಂದನಿಗೆ ಸಹಕರಿಸುತ್ತಿದ್ದ. ಜೊತೆಗೆ ಆತನ ಸಹೋದರ ಪ್ರಿಯಕರನನ್ನೂ ಕರೆತಂದಿದ್ದ. ಹಣ ನೀಡಿದ ಯುವಕರಿಗೆ ಅನುಮಾನ ಬಾರದಂತೆ ನಟಿಸುತ್ತಿದ್ದ.ನೈಋತ್ಯ ರೈಲ್ವೆ ಮುಖ್ಯ ಕಚೇರಿ ಹುಬ್ಬಳ್ಳಿಯಲ್ಲಿ ನಿನ್ನೆ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಯುವಕರಿಗೆ ತಿಳಿಸಿದ್ದರು. ಭಾನುವಾರವೇ ಹುಬ್ಬಳ್ಳಿಗೆ ಆಗಮಿಸಿದ್ದ ಯುವಕರನ್ನು ಕೈಲಾಶ್ ಲಾಡ್ಜ್ ‍ನಲ್ಲಿ ಉಳಿಸಿ, ತಾವು ಇನ್ನೊಂದು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಸೋಮವಾರ ರೈಲ್ವೆ ಆಸ್ಪತ್ರೆಯ ಒಂದು ಕೋಣೆಯಲ್ಲಿ ನಕಲಿ ವೈದ್ಯಕೀಯ ತಪಾಸಣೆ ಏರ್ಪಾಟು ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಆರ್‍ಪಿಎಫ್ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಗೆ ರೈಲ್ವೆ ಆಸ್ಪತ್ರೆಯಲ್ಲೇ ನಕಲಿ ವೈದ್ಯಕೀಯ ಪರೀಕ್ಷೆ ಮಾಡಿಸುವಷ್ಟು ಧೈರ್ಯ ಇದೆ ಎಂದರೆ ಪ್ರಕರಣದಲ್ಲಿ ಮೇಲಾಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬ ಶಂಕೆ ಮೂಡುತ್ತಿದೆ. ಪ್ರಕರಣದಲ್ಲಿ ಇನ್ನೂ ಹಲವರು ವಂಚನೆಗೀಡಾಗಿರುವ ಸಾಧ್ಯತೆಗಳಿದ್ದು, ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.ಈನಡುವೆ ಬಂಧಿತ ನಾಲ್ವರು ಆರೋಪಗಳನ್ನು ಹೆಚ್ಚಿನ ತನಿಖೆಗಾಗಿ ಕೇಶ್ವಾಪೂರ ಪೊಲೀಸ್ ರಿಗೆ ರೇಲ್ವೆ ಪೊಲೀಸರು ಒಪ್ಪಿಸಿದ್ದಾರೆ.

8 thoughts on “ಹುಬ್ಬಳ್ಳಿ : ಕೇಂದ್ರ ಸರ್ಕಾರಿ ನೌಕರಿ ಆಮಿಷ ತೋರಿಸಿ ವಂಚಿಸಿದ ನಾಲ್ವರ ಬಂಧನ

 • October 20, 2017 at 8:52 PM
  Permalink

  An intriguing discussion is worth comment. I believe that you
  ought to write more on this topic, it might not be a taboo matter but typically
  folks don’t discuss these subjects. To the next!
  Many thanks!!

 • October 20, 2017 at 11:48 PM
  Permalink

  My brother suggested I might like this blog. He was entirely right.
  This post truly made my day. You can not imagine simply how much time I had spent for this info!
  Thanks!

 • October 21, 2017 at 1:09 AM
  Permalink

  I love what you guys are usually up too. This sort of clever work and
  exposure! Keep up the awesome works guys I’ve you guys to my personal
  blogroll.

 • October 21, 2017 at 1:41 AM
  Permalink

  Just wish to say your article is as astonishing. The clearness in your post is
  just nice and i can assume you are an expert on this subject.
  Fine with your permission let me to grab your feed to keep updated with forthcoming post.
  Thanks a million and please carry on the gratifying work.

 • October 24, 2017 at 1:47 PM
  Permalink

  Thanks on your marvelous posting! I definitely enjoyed reading it, you are
  a great author.I will be sure to bookmark your blog and definitely will come back someday.
  I want to encourage you to ultimately continue your great
  posts, have a nice day!

 • October 25, 2017 at 9:08 AM
  Permalink

  Hey there, I think your site might be having browser compatibility
  issues. When I look at your website in Firefox, it looks
  fine but when opening in Internet Explorer, it has some overlapping.
  I just wanted to give you a quick heads up!
  Other then that, very good blog!

 • October 25, 2017 at 10:57 AM
  Permalink

  Simply desire to say your article is as astonishing. The
  clarity in your post is simply nice and that i could think you’re an expert on this
  subject. Well along with your permission allow me to take hold of your feed to keep updated
  with imminent post. Thank you a million and please carry on the rewarding work.

Comments are closed.

Social Media Auto Publish Powered By : XYZScripts.com