ಕಾಬೂಲ್‌ನಲ್ಲಿ ಬಾಂಬ್‌ ಸ್ಫೋಟ : 24 ಮಂದಿ ಸಾವು, 45 ಮಂದಿಗೆ ಗಾಯ

ಕಾಬೂಲ್‌ : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ  ಕಾರ್‌ ಬಾಂಬ್‌ ಸ್ಫೋಟಗೊಂಡಿದ್ದು, ಘಟನೆಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ. 45ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವುದಾಗಿ ಮೂಲಗಳು ತಿಳಿಸಿವೆ.

ನೌಕರರನ್ನು ಸಾಗಿಸುತ್ತಿದ್ದ ಬಸ್‌ ಮೇಲೆ ಬೆಳಗ್ಗೆ 7 ಗಂಟೆಯ ಸುಮಾರಿಗೆ ಉಗ್ರರು ಕಾರ್‌ ಬಾಂಬ್‌ ದಾಳಿ ನಡೆಸಿದ್ದಾರೆ ಎಂದು ಕಾಬೂಲ್‌ ಆಂತರಿಕ ಸಚಿವಾಲಯ ಹೇಳಿದೆ. ಸರ್ಕಾರದ ಉಪ ಮುಖ್ಯ ಕಾರ್ಯ ನಿರ್ವಾಹಕ ಮೊಹಮ್ಮದ್‌ ಮೊಹಾಕಿ ಅವರ ಮನೆ ಬಳಿ ಘಟನೆ ನಡೆದಿದೆ. ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುತ್ತ ಮುತ್ತಲಿನ ಅಂಗಡಿಗಳು, ಕಾರ್‌ಗಳು ನಾಶವಾಗಿರುವುದಾಗಿ ಮೂಲಗಳು ತಿಳಿಸಿವೆ.

 

Comments are closed.

Social Media Auto Publish Powered By : XYZScripts.com