ದೆಹಲಿ : ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದ 6 ಕಾಂಗ್ರೆಸ್ ಸಂಸದರ ಅಮಾನತು

ದೆಹಲಿ : ಲೋಕಸಭೆ ಕಲಾಪದಲ್ಲಿ ಗದ್ದಲ ಎಬ್ಬಿಸಿದ ಆರು ಮಂದಿ ಕಾಂಗ್ರೆಸ್‌ ಸಂಸದರನ್ನು ಸ್ಪೀಕರ್‌ ಸುಮಿತ್ರಾ ಮಹಜನ್ ಐದು ದಿನಗಳ ಕಾಲ ಅಮಾನತುಗೊಳಿಸಿದ್ದಾರೆ. ಭೋಪೋರ್ಸ್‌ ಹಗರಣ, ಗೋರಕ್ಷಣೆ ಕುರಿತಂತೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಲೋಕಸಭೆಯ ಬಾವಿಗಿಳಿದ ಸಂಸದರು ಗದ್ದಲ ಎಬ್ಬಿಸಿ ಸ್ಪೀಕರ್ ಸುಮಿತ್ರಾ ಮಹಜನ್‌ರತ್ತ  ಕಾಗದ ತೂರಿದ ಹಿನ್ನೆಲೆಯಲ್ಲಿ ಆರು ಮಂದಿ ಸಂಸದರನ್ನು ಐದು ದಿನ ಅಮಾನತು ಮಾಡಿದ್ದಾರೆ.

ಇದನ್ನು ದೇಶದ ಜನರೆಲ್ಲರೂ ನೋಡುತ್ತಿರುತ್ತಾರೆ. ನೋಡಬೇಕು ಎಂದು ಮಹಜನ್ ಸಿಟ್ಟಿನಿಂದ ಹೇಳಿದ್ದಾರೆ. ಕಾಂಗ್ರೆಸ್‌ ಸಂಸದರು ಗಲಭೆ ನಡೆಸುವಾಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಲ್ಲೇ ಇದ್ದರು. ಘಟನೆ ಬಳಿಕ ಸೋನಿಯಾ ಗಾಂಧಿ ತಮ್ಮ ಕಚೇರಿಯಲ್ಲಿ ಕಾಂಗ್ರೆಸ್‌ ಮುಖಂಡರ ಜೊತೆ ಸಭೆ ನಡೆಸಿದ್ದು, ಅಮಾನತು ಮಾಡಿರುವುದರ ವಿರುದ್ಧ ನಾಳೆ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.