ಟೊಮೆಟೊ ಕಳ್ಳರ ಭಯ : ಕಳ್ಳರ ಕಾಟ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ನಿಯೋಜನೆ!

ಮುಂಬೈ : ಚಿನ್ನ, ಬೆಳ್ಳಿ ಮುಂತಾದ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುವುದು ತಿಳಿದೇ ಇದೆ. ಆದರೆ ಚಿನ್ನದ ಬೆಲೆ ಬಂದಿರುವ ಟೊಮೆಟೊ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಮುಂಬೈನ ಮಾರುಕಟ್ಟೆಯಲ್ಲಿ 70,000ರೂನ ಟೊಮೆಟೊವನ್ನು ದರೋಡೆ ಮಾಡಿದ್ದಾರೆ.

ಮುಂಬೈನ್ ಶಾಂತಿನಗರ ನಿವಾಸಿಯಾಗಿರುವ ಶಾಂತಿಲಾಲ್ ಶ್ರೀವಾಸ್ತವ್ ಎಂಬುವವರು ಮಾರಾಟಕ್ಕಾಗಿ ಮುಂಬೈನ ಎಪಿಎಂಸಿಯಲ್ಲಿ ಟೊಮೆಟೊ
ಖರೀದಿಸಿದ್ದರು. ಅಂಗಡಿ ಮುಂದೆ ಇಡಲಾಗಿದ್ದ ಟೊಮೆಟೋಗಳನ್ನು ಖದೀಮರು ರಾತ್ರೋರಾತ್ರಿ ಕದ್ದು ಪರಾರಿಯಾಗಿದ್ದಾರೆ.
ಇದೇ ರೀತಿ ಹಲವೆಡೆ ಮಾರುಕಟ್ಟೆಯಲ್ಲಿ ಟೊಮೆಟೋ ಕಳ್ಳತನವಾಗುತ್ತಿರುವ ಹಿನ್ನಲೆಯಲ್ಲಿ ಮಧ್ಯಪ್ರದೇಶದ ಇಂದೋರ್ ಮಾರುಕಟ್ಟೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಲ್ಲಲ್ಲಿ ಯೋಧರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ದಹಿಸರ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.

 

Comments are closed.