ಮುಗುಳುನಗೆ : ರಿಲೀಸ್‌ ಆಯ್ತು ಭಟ್ಟರ ಲೇಖನಿಯಿಂದ ಬಂದ ಮತ್ತೊಂದು ಸೂಪರ್‌ ಹಾಡು

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ ಭಟ್ ಮತ್ತೊಮ್ಮೆ ಮುಗುಳುನಗೆಯ ಮೂಲಕ ಮೋಡಿ ಮಾಡಲು ಬರುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ, ಸೋನು ನಿಗಮ್‌ ಅವರ ಧ್ವನಿಯಲ್ಲಿ ಕೆರೆ ಏರಿ ಮೇಲೆ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ, ಹುಡುಗಿ ನೆನಪಾದಾಗ ಬೆವರು ಜಾಸ್ತಿ ಅಂದ ಕಣ್ಣು ಮುಚ್ಚಿ ಎಂಬ ಹಾಡನ್ನು ರಾಕಿಂಗ್‌ ಸ್ಟಾರ್‌ ಯಶ್‌ ಬಿಡುಗಡೆ ಮಾಡಿದ್ದಾರೆ. ಈಗಾಗಲೆ ಮುಗುಳುನಗೆ ಸಿನಿಮಾದ ಹಾಡುಗಳು ಸಖತ್ ಹಿಟ್‌ ಆಗಿದ್ದು, ಆ ಪಟ್ಟಿಗೆ ಈ ಹಾಡೂ ಸೇರ್ಪಡೆಯಾಗುವುದು ಖಚಿತ.

ಸಯ್ಯದ್ ಸಲಾಮ್ ನಿರ್ಮಾಣದ ಮುಗುಳುನಗೆ ಚಿತ್ರದಲ್ಲಿ ಗಣೇಶ್, ಅಮೂಲ್ಯ, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅಪೂರ್ವ ಅರೋರಾ, ಜಗ್ಗೇಶ್, ಅಚ್ಯುತ ರಾವ್, ರಂಗಾಯಣ ರಘು ಮುಂತಾದ ಘಟಾನುಘಟಿ ತಾರೆಯರು ಸಿನಿಮಾದಲ್ಲಿ ನಟಿಸಿದ್ದಾರೆ.

Comments are closed.