ಯುದ್ಧ ನಡೆದರೆ ಭಾರತದ ಸೋಲು ಕಟ್ಟಿಟ್ಟ ಬುತ್ತಿ ಎಂದ ಚೀನಾ ಮಾಧ್ಯಮ

ಬೀಜಿಂಗ್‌ :  ಭಾರತ ಸಿಕ್ಕಿಂನಿಂದ ತನ್ನ ಸೇನೆಯನ್ನು ಹಿಂಪಡೆಯದಿದ್ದರೆ ಗಡಿಯಲ್ಲಿ ಇರುವ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಚೀನಾದ ಮಾಧ್ಯಮ ಹೇಳಿದ್ದು, ಯುದ್ಧ ನಡೆದರೆ ಭಾರತದ ಸೋಲು ಖಚಿತ ಎಂದಿದೆ.

ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡಿದ್ದ ಸುಷ್ಮಾ ಸ್ವರಾಜ್  ಸಿಕ್ಕಿಂ ಗಡಿ ವಿಚಾರವಾಗಿ ಎಲ್ಲ ದೇಶಗಳು ನಮ್ಮೊಂದಿಗಿವೆ. ಎರಡೂ ದೇಶಗಳು ಸೇನೆ ಹಿಂತೆಗೆದು ಮಾತುಕತೆಗೆ ತೊಡಗಿಸಿಕೊಂಡರೆ ಒಳಿತು. ಚೀನಾ ಯುದ್ಧಕ್ಕೆ ಬಂದರೆ ನಾವೂ ಸಿದ್ಧವಿದ್ದೇವೆ ಎಂದಿದ್ದರು. ಈ ವಿಚಾರವನ್ನು ಹೇಳಿದ ಸುಷ್ಮಾ ಸ್ವರಾಜ್ ಸುಳ್ಳುಗಾರ್ತಿ ಎಂದು ಜರೆದಿದೆ. ಮಾತುಕತೆ ನಡೆಸುವ ಸಲುವಾಗಿ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ. ಡೋಕ್ಲಾಮ್ ಚೀನಾದ ಪ್ರದೇಶವಾಗಿದ್ದು, ಒಂದಿಂಚು ಭೂಮಿಯನ್ನು ಕಳೆದುಕೊಳ್ಳಲು ಒಪ್ಪುವುದಿಲ್ಲ ಎಂದಿದೆ. ಜೊತೆಗೆ ಯುದ್ಧವಾದರೆ ಯಾವ ರಾಷ್ಟ್ರವೂ ಭಾರತಕ್ಕೆ ಬೆಂಬಲ ನೀಡುವುದಿಲ್ಲ. ಭಾರತದ ಸೇನಾ ಬಲ ಚೀನಾಗೆ ಹೋಲಿಸಿದರೆ ಏನೂ ಅಲ್ಲ ಎಂದಿದೆ.

 

Comments are closed.