ಹೆಣ್ಣು ಮಗುವಿನ ತಾಯಿಯಾದ ಸನ್ನಿ ಲಿಯೋನ್..ಇಲ್ಲಿದೆ ಫುಲ್ ಡೀಟೇಲ್ಸ್!

ಮಾಜಿ ನೀಲಿ ರಾಣಿ ಸನ್ನಿಲಿಯೋನ್ ಯಾರಿಗ್ ಗೊತ್ತಿಲ್ಲ ಹೇಳಿ. ಪೋರ್ನ್ ಫಿಲ್ಮ್ ಇಂಡಸ್ಟ್ರಿಯಿಂದ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ನಂತ್ರ ಬಾಲಿವುಡ್‍ನಲ್ಲಿ ಬ್ಯುಸಿಯಾದ ಸನ್ನಿ ಲಿಯೋನ್ ಈಗ ಹೆಣ್ಣು ಮಗುವಿನ ತಾಯಿಯಾಗಿದ್ದಾಳೆ. ಕನ್‍ಫ್ಯೂಸ್ ಆಗ್ಬೇಡಿ. ಸನ್ನಿ ಲಿಯೋನ್ ಮತ್ತಾಕೆಯ ಪತಿ ಡೇನಿಯಲ್ ವೆಬರ್ ಹೆಣ್ಣು ಮಗುವೊಂದನ್ನ ದತ್ತು ತೆಗೆದುಕೊಂಡಿದ್ದಾರೆ. ಆ ಮೂಲಕ ಒಂದು ಮಗುವಿನ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಮಹಾರಾಷ್ಟ್ರದ ಲಾಥುರ್‍ನ 21 ತಿಂಗಳ ಹೆಣ್ಣು ಮಗುವೊಂದನ್ನ ದತ್ತು ಪಡೆದಿರೋ ದಂಪತಿ ಮಗುವಿಗೆ ನಿಶಾ ಕೌರ್ ವೆಬರ್ ಅಂತ ಹೆಸರಿಟ್ಟಿದ್ದಾರೆ.

ಬಹಳ ದಿನಗಳಿಂದ ಡೇನಿಯಲ್ ಮತ್ತು ಸನ್ನಿ ಲಿಯೋನ್ ಮಗುವೊಂದನ್ನ ದತ್ತು ಪಡೆದುಕೊಳ್ಳೊ ಕನಸು ಕಂಡಿದ್ರಂತೆ. ಮಗುವನ್ನ ದತ್ತು ಪಡೆದಿರೋ ಡೇನಿಯಲ್ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಮಗುವನ್ನ ದತ್ತು ಪಡೆದುಕೊಂಡಿರೋದ್ರಿಂದ ನಮ್ಮ ಬಾಳಿನಲ್ಲಿ ಸಾಕಷ್ಟು ಬದಲಾವಣೆಗಳಾಗ್ತಿದೆ, ತುಂಬಾ ಸಂತಸವಾಗ್ತಿದೆ ಅಂತ ತಿಳಿಸಿದ್ದಾರೆ. ಇನ್ನೂ ಸನ್ನಿ ಸಹ ಮಗು ತುಂಬಾ ಕ್ಯೂಟಾಗಿದೆ, ಮಗುವಿನ ನಗು ನೋಡಿದ್ರೆ ಹೃದಯ ಕರಗುತ್ತೆ ಅಂತ ಹೇಳಿಕೊಂಡಿದ್ದಾರೆ.

ಕೆಲದಿನಗಳಿಂದ ಸನ್ನಿ ಲಿಯೋನ್ ಶೀಘ್ರದಲ್ಲೇ ತಾಯಿಯಾಗ್ತಿದ್ದಾರೆ ಅನ್ನೋ ಗಾಳಿ ಸುದ್ದಿ ಹಬ್ಬಿತ್ತು. ಅದೆಲ್ಲಾ ಸುಳ್ಳು ಅಂತ ದಂಪತಿ ಹೇಳಿತ್ತು. ಆದ್ರೀಗ ಮಗುವನ್ನ ದತ್ತುಪಡೆದುಕೊಂಡಿರುವುದರಿಂದ ಪರೋಕ್ಷವಾಗಿ ಆ ಸುದ್ದಿ ನಿಜವಾದಂತಾಗಿದೆ. ಸದ್ಯ ಸನ್ನಿ, ಡೇನಿಯಲ್, ನಿಶಾ ಕೌರ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.

Comments are closed.