ಕಾಶ್ಮೀರ ಸಮಸ್ಯೆಗೆ ಅಮೆರಿಕ, ಚೀನಾದಂತಹ ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸಲಿ : ಫಾರೂಕ್‌ ಅಬ್ದುಲ್ಲಾ

ದೆಹಲಿ : ಕಾಶ್ಮೀರ ವಿವಾದ ಬಗೆಹರಿಯಬೇಕಾದರೆ ಭಾರತ,  ಅಮೆರಿಕ, ಚೀನಾದಂತಹ ರಾಷ್ಟ್ರಗಳನ್ನು ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಬೇಕೆಂದು ಜಮ್ಮು – ಕಾಶ್ಮೀರದ ಮಾಜಿ ಸಿಎಂ ಫಾರುಖ್ ಅಬ್ದುಲ್ಲಾ  ಹೇಳಿದ್ದಾರೆ.

ವಿಶ್ವದ ಹಲವು ರಾಷ್ಟ್ರಗಳೊಂದಿಗೆ ಭಾರತ ಮಿತ್ರತ್ವ ಹೊಂದಿದೆ. ಆದ್ದರಿಂದ ಕಾಶ್ಮೀರ ಸಮಸ್ಯೆ ಬಗೆಹರಿಸಲು, ಭಾರತ ಹಾಗೂ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವಂತೆ ಚೀನಾ ಹಾಗೂ ಅಮೆರಿಕದಂತಹ ರಾಷ್ಟ್ರಗಳೊಂದಿಗೆ ಮನವಿ ಮಾಡಬೇಕು. ಕಾಶ್ಮೀರ ಸಮಸ್ಯೆ ಬಗೆಹರಿಸಲುಇನ್ನೆಷ್ಟು ದಿನ ಕಾಯಬೇಕು? ವಿಶ್ವದ ಹಲವು ರಾಷ್ಟ್ರಗಳೊಂದಿಗೆ ಭಾರತ ಸ್ನೇಹ ಹೊಂದಿದೆ.
ಅಂತಹ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ ಕಾಶ್ಮೀರ ವಿವಾದ ಸಂಬಂಧ ಮಧ್ಯಸ್ಥಿಕೆ ವಹಿಸುವಂತೆ ಭಾರತ ಮನವಿ ಸಲ್ಲಿಸಬೇಕು ಎಂದಿದ್ದಾರೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಕಾಶ್ಮೀರ ಸಮಸ್ಯೆ ಬಗೆಹರಿಯಬೇಕೆಂದು ಹೇಳಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಚೀನಾ ಸಹ ಸಿದ್ಧವಿದೆ. ಚೀನಾದೊಂದಿಗೆ ಭಾರತ ಮಾತುಕತೆ ನಡೆಸಿದ್ದೇ ಆದರೆ, ಯುದ್ಧದ ಅಗತ್ಯವಿರುವುದಿಲ್ಲ. ಚೀನಾ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ತೀರ್ಮಾನ ನೀಡಲಿದೆ ಎಂದಿದ್ದಾರೆ.
ಅಹಂಕಾರ ಹಾಗೂ ಮೊಂಡುತನದ ವರ್ತನೆಗಳಿಂದ ದೇಶದ ಪ್ರಗತಿಯಾಗುವುದಿಲ್ಲ. ಸ್ನೇಹಿತರಾದರೂ ಬದಲಾಗುತ್ತಾರೆ, ಆದರೆ, ನೆರೆಯವರು ಬದಲಾಗಲ್ಲ ಎಂಬ ವಾಯಪೇಯಿಯವರ ಹೇಳಿಕೆಯನ್ನು ಈ ವೇಳೆ ನೆನಪಿಸಿಕೊಳ್ಳಬೇಕಿದೆ. ಮಿತ್ರತ್ವವನ್ನು ಮುಂದುವರೆಸಬೇಕಾದರೆ ಒಬ್ಬರಾದರೂ ಮುಂದಡಿ ಇಡಬೇಕು. ಇಲ್ಲವೇ, ಶತ್ರುಗಳಾಗುವ ಮೂಲಕ ಅವರನ್ನು ಹಿಮ್ಮೆಟ್ಟಿಸಬೇಕು ಎಂದಿದ್ದಾರೆ. ಕಾಶ್ಮೀರದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಸಾವಿಗೀಡಾಗುತ್ತಿದ್ದಾರೆ. ಆದ್ದರಿಂದ ದುಷ್ಕರ್ಮಿಗಳನ್ನು ಮಟ್ಟ ಹಾಕುವಂತೆ ಈ ಮೂಲಕ ನಾನು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

 

Comments are closed.

Social Media Auto Publish Powered By : XYZScripts.com