ಬಾಸ್ಕೆಟ್‌ಗೆ ಬಾಲ್ ಹಾಕಲು ವಿಫಲರಾದ ಸಿಎಂ : ಕೋಚ್‌ ಇಟ್ಟುಕೊಳ್ಳಿ ಎಂದ ಆಟಗಾರರು

ಬೆಂಗಳೂರು : ನವೀಕೃತ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ಸಿಎಂ ಸಿದ್ದರಾಮಯ್ಯ ಬಾಸ್ಕೆಟ್‌ ಬಾಲ್‌ ಆಡುವ  ಮೂಲಕ ಉದ್ಘಾಟನೆ ಮಾಡಿದ್ದಾರೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ಸದಸ್ಯರು ಅಭ್ಯಾಸ ಮಾಡುವ ವೇಳೆ, ಈ ವೇಳೆ ಉದ್ಘಾಟನೆಗೆ ಬಂದ ಸಿಎಂ, ಎಲ್ಲರಿಗೂ ಹಸ್ತಲಾಘವ ಮಾಡಿ ನಂತರ ಬಾಸ್ಕೆಟ್‌ ಬಾಲ್‌ ಆಟವಾಡಿದ್ದಾರೆ. ನಾಲ್ಕು ಬಾರಿ ಬಾಸ್ಕೆಟ್‌ಗೆ ಬಾಲ್‌ ಹಾಕಲು ವಿಫಲರಾಗಿದ್ದು, ಆಟಗಾರರು ಕೋಚ್‌ ತಗೊಳ್ಳಲಿ ಎಂದು ಹಾಸ್ಯ ಮಾಡಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಮಧ್ವರಾಜ್‌, ಕೆ.ಜೆ ಜಾರ್ಜ್‌ , ಸಚಿವ ರೋಷನ್‌ ಬೇಗ್‌ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ ಮಾತನಾಡಿದ ಪ್ರಮೋದ್ ಮಧ್ವರಾಜ್, ಸ್ಟೇಡಿಯಂ ಅತ್ಯಂತ ದುಸ್ಥಿತಿಯಲ್ಲಿತ್ತು. ಒಂಬತ್ತು ಕೋಟಿ ಖರ್ಚು ಮಾಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಸೂಕ್ತವಾದ ರೀತಿಯಲ್ಲಿ ನವೀಕರಿಸಿದ್ದೇವೆ. ಇದಾದ ಬಳಿಕ ಹೊರಾಂಗಣ ಕ್ರೀಡಾಂಗಣ ನವೀಕರಿಸಲಾಗುತ್ತದೆ ಎಂದಿದ್ದಾರೆ. ಜೊತೆಗೆ ಅಗತ್ಯವಿದ್ದರೆ ನ್ಯಾಯಾಲಯದ ಮನವೊಲಿಸಿ ಕ್ರೀಡಾಂಗಣವನ್ನು ಅನ್ಯ ಉದ್ದೇಶಗಳಿಗೂ ಬಳಕೆ ಮಾಡುವುದಾಗಿ ಹೇಳಿದ್ದಾರೆ.

 

Comments are closed.