ಬೆಂಗಳೂರು : ಜನರಲ್ ಚೆಕಪ್ ಗಾಗಿ ವಿಕ್ರಮ್ ಆಸ್ಪತ್ರೆಗೆ ದಾಖಲಾದ ನಟ ಅಂಬರೀಷ್

ಬೆಂಗಳೂರು : ನಟ ಅಂಬರೀಷ್ ರುಟೀನ್ ಚೆಕಪ್ ಗಾಗಿ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ಧಾರೆ. ತೀವ್ರ ನಿಗಾ ಘಟಕದಲ್ಲಿ ಅಂಬರೀಷ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದು ಯಾವುದೇ ಆಪಾಯ ಇಲ್ಲ, ಎರಡು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿ ನಂತರ ಡಿಸ್ಜಾರ್ಚ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

‘ ಆಸ್ಪತ್ರೆಯ ಡೇ ಕೇರ್ ಸೆಂಟರ್ ನಲ್ಲಿ ರುಟೀನ್ ಚೆಕಪ್ ಗೆ ಬಂದಿರುವ ಅಂಬರೀಶ್ ವರ್ಷಕ್ಕೊಮ್ಮೆ ಫುಲ್ ಬಾಡಿ ಚೆಕಪ್ ಮಾಡಲಾಗುತ್ತದೆ, ಇಂದು ಅದೇ ಪರೀಕ್ಷೆಗಳಿಗಾಗಿ ವಿಕ್ರಂ ಆಸ್ಪತ್ರೆಗೆ ಅಂಬರೀಶ್ ಬಂದಿದ್ಧಾರೆ. ಬೆಳಗ್ಗಿನಿಂದ ಬ್ಲಡ್ ಶುಗರ್, ಉಸಿರಾಟದ ಲಯ, ಬಿಪಿ ಮುಂತಾದ ಅನೇಕ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಇದು ರೂಟಿನ್ ಚೆಕಪ್ ಅಷ್ಟೇ, ಸುಮ್ಮನೇ ಗಾಬರಿಯಾಗುವ ಅವಶ್ಯಕತೆಯಿಲ್ಲ. ಇಂದು ಸಂಜೆಯೊಳಗೆ ಅಂಬರೀಶ್ ಮನೆಗೆ ಮರಳಲಿದ್ದಾರೆ ‘ ಎಂದು ಅಂಬರೀಶ್ ಗೆ ವೈದ್ಯಕೀಯ ತಪಾಸಣೆಗಳನ್ನು ಮಾಡುತ್ತಿರುವ ಹಿರಿಯ ವೈದ್ಯ ಡಾ ಸತೀಶ್ ಹೇಳಿದ್ದಾರೆ.

One thought on “ಬೆಂಗಳೂರು : ಜನರಲ್ ಚೆಕಪ್ ಗಾಗಿ ವಿಕ್ರಮ್ ಆಸ್ಪತ್ರೆಗೆ ದಾಖಲಾದ ನಟ ಅಂಬರೀಷ್

  • October 20, 2017 at 10:40 PM
    Permalink

    Hi friends, how is everything, and what you would like to say about this article, in my view its in fact amazing in favor of me.|

Comments are closed.