ಕೊಪ್ಪಳ : ಜಮೀನು ಒತ್ತುವರಿಗೆ ಸಿಗದ ಪರಿಹಾರ : ಡೆತ ನೋಟ್ ಬರೆದಿಟ್ಟು ರೈತನ ಆತ್ಮಹತ್ಯೆ

ಕೊಪ್ಪಳ :- ಒತ್ತುವರಿಯಾದ ಜಮೀನಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಮನನೊಂದು ರೈತನೊಬ್ಬ ನೇಣಿಗೆ ಶರಣಾಗಿದ್ದಾನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಉಪ್ಪಲದಿನಿ ಗ್ರಾಮದ ಸಿದ್ದಪ್ಪ ಹಣಮಪ್ಪ ಕರಡಿ (೨೫) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ NH 15 ರಸ್ತೆ ಕಾಮಗಾರಿಗೆ ಜಮೀನು ಒತ್ತುವರಿಯಾಗಿ ಪರಿಹಾರ ದೊರಕಿರಲಿಲ್ಲ. ಇದರಿಂದಾಗಿ ಮನನೊಂದ ಹಣಮಪ್ಪ ಡೆತ್ ನೊಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೇವೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.