ಕೊನೆಗೂ ಗೆದ್ದ ರವಿ ಶಾಸ್ತ್ರಿ, ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ನೇಮಕ

ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಸಂಜಯ್ ಬಂಗಾರ್ ಅಸಿಸ್ಟೆಂಟ್ ಆಗಿ, ಆರ್ ಶ್ರೀಧರ್ ಫೀಲ್ಡಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ. ಎಡಗೈ ವೇಗಿ ಜಹೀರ್ ಖಾನ್ ವರ್ಷದಲ್ಲಿ ಭಾರತ ತಂಡಕ್ಕೆ 150 ದಿನಗಳು ಮಾತ್ರ ಲಭ್ಯರಾಗಲಿದ್ದಾರೆ. 54 ವರ್ಷದ ಮಾಜಿ ಕ್ರಿಕೆಟಿಗ ಭರತ್ ಅರುಣ್, ರವಿಶಾಸ್ತ್ರಿ 19 ವರ್ಷದೊಳಗಿನವರ ಭಾರತ ತಂಡದಲ್ಲಿ ಹಾಗೂ ರಾಷ್ಟ್ರೀಯ ತಂಡದಲ್ಲಿ ಸಹ ಆಟಗಾರರಾಗಿದ್ದರು.

 

ಭರತ್ ಅರುಣ್ ಅವರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಿರುವುದಕ್ಕೆ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಸಲಹಾ ಸಮಿತಿಗೆ ರವಿಶಾಸ್ತ್ರಿ ಧನ್ಯವಾದ ಹೇಳಿದ್ಧಾರೆ. ಬ್ಯಾಟಿಂಗ್ ಮಾರ್ಗದರ್ಶಕರಾಗಿ ರಾಹುಲ್ ದ್ರಾವಿಡ್ ಅವರ ಪಾತ್ರದ ಬಗ್ಗೆಯೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ.

One thought on “ಕೊನೆಗೂ ಗೆದ್ದ ರವಿ ಶಾಸ್ತ್ರಿ, ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ನೇಮಕ

Comments are closed.

Social Media Auto Publish Powered By : XYZScripts.com