ಯುದ್ಧಕ್ಕೆ ನಾವ್‌ ರೆಡಿ, ನೀವು ರೆಡಿನಾ? : ಭಾರತಕ್ಕೆ ಸವಾಲೆಸೆದ ಚೀನಾ

ಬೀಜಿಂಗ್‌ : ಸಿಕ್ಕಿಂ ಗಡಿ ವಿಚಾರದಲ್ಲಿ ಭಾರತ ಹಾಗೂ ಚೀನಾದ ಮಧ್ಯೆ ಬಿರುಕು ಹೆಚ್ಚುತ್ತಲೇ ಇದೆ. ಸಿಕ್ಕಿಂನಿಂದ ಹಿಂದೆ ಸರಿಯದ ಸೇನೆಯ ನಿರ್ಧಾರಕ್ಕೆ ಚೀನಾ ಎಚ್ಚರಿಕೆ ನೀಡಿದ್ದು, ಚೀನಾದ ಜೊತೆ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ಭಾರತ ಸಿದ್ಧವಾಗಿರಲಿ ಎಂದು ಚೀನಾ ಸರ್ಕಾರಿ ಒಡೆತನದ ಪತ್ರಿಕೆ ಗ್ಲೋಬಲ್ ಟೈಮ್ಸ್‌ ಎಚ್ಚರಿಕೆ ನೀಡಿದೆ. ಚೀನಾ ಹಾಗೂ ಭಾರತ 3,488 ಕಿ.ಮೀ ಉದ್ದದ ಗಡಿ ಹೊಂದಿದ್ದು, ಈ ಸ್ಥಳದಲ್ಲಿ ಚೀನಾ ಸಂಘರ್ಷದ ತಾಣಗಳನ್ನು ಸ್ಥಾಪಿಸಲಿದೆ. ಆದ್ದರಿಂದ ಭಾರತ ಪೂರ್ಣ ಪ್ರಮಾಣದ ಮಿಲಿಟರಿ ಸಂಘರ್ಷಕ್ಕೆ ಸಿದ್ಧವಾಗಿರುವಂತೆ ಸೂಚಿಸಿದೆ.

ಜೊತೆಗೆ ಟಿಬೆಟ್‌ನ ಪರ್ವತಗಳಲ್ಲಿ ಚೀನಾ ಯುದ್ಧ ತರಬೇತಿ ನಡೆಸಿ, ಚೀನಾದ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಇದರ ಬೆನ್ನಲ್ಲೇ ಈಗ ಭಾರತಕ್ಕೆ ಯುದ್ಧದ ಮುನ್ನೆಚ್ಚರಿಕೆ ನೀಡುವ ಬರಹಗಳನ್ನು ಪ್ರಕಟಿಸಿದೆ.

ಭಾರತದ ವಿರುದ್ಧ ಯುದ್ಧಕ್ಕೆ ಹೋಗಲು ಚೀನಾ ಭಯಪಡುವುದಿಲ್ಲ. ನಾವು ದೀರ್ಘಾವಧಿಯ ಯುದ್ದಕ್ಕೆ ಸಿದ್ಧರಾಗಿದ್ದೇವೆ’ ಎಂದು ಚೀನಾ ತನ್ನ ಪತ್ರಿಕೆಯ ಮೂಲಕ ಭಾರತಕ್ಕೆ ಎಚ್ಚರಿಕೆ ನೀಡಿದೆ.

Comments are closed.

Social Media Auto Publish Powered By : XYZScripts.com