ಹುಬ್ಬಳ್ಳಿ : ಹೆಲ್ಮೆಟ್ ಹಾಕಿಕೊಂಡು ಬಂದು ತಲ್ವಾರ್ ನಿಂದ ಹಲ್ಲೆ ಮಾಡಿದ ಯುವಕ

ಹುಬ್ಬಳ್ಳಿ : ಹೆಲ್ಮೆಟ್ ಹಾಕಿಕೊಂಡು ಯುವಕನೊಬ್ಬ ತಲ್ವಾರ್ ನಿಂದ ದಾಳಿ ನಡೆಸಿದ ಘಟನೆ ಹುಬ್ಬಳ್ಳಿಯ ಶಾಂತಿನಗರದಲ್ಲಿ ನಡೆದಿದೆ. ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಬಂದು ತಲ್ವಾರ್ ನಿಂದ ದಾಳಿ ಮಾಡಿ ಯುವಕ ಪರಾರಿಯಾಗಿದ್ದಾನೆ. ಯಲ್ಲವ್ವ, ಪ್ರದೀಪ್, ಭಾರತಿ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನೀಡಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಶೋಕ ನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಪೊಲೀಸರು ಕಾರಣವನ್ನು ಪತ್ತೆ ಹಚ್ಚುತ್ತಿದ್ದಾರೆ. ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.

Comments are closed.

Social Media Auto Publish Powered By : XYZScripts.com