‘ಗೇಮ್ ಆಫ್ ಥ್ರೋನ್ಸ್ – 7’ ಪ್ರೀಮಿಯರ್ ಬಿಡುಗಡೆ, HBO ವೆಬ್ಸೈಟ್ ಕ್ರಾಷ್..!

ವಿಶ್ವಾದ್ಯಂತ ಬಹು ಜನಪ್ರಿಯವಾದ ‘ ಗೇಮ್ ಆಫ್ ಥ್ರೋನ್ಸ್ ‘ ಟಿವಿ ಷೋನ 7 ನೇ ಸೀಸನ್ನಿನ ಪ್ರಿಮಿಯರ್ ‘ವಿಂಟರ್ ಇಸ್ ಕಮಿಂಗ್ ‘ ಬಿಡುಗಡೆಯಾಗಿದೆ. ಬಹುನಿರೀಕ್ಷೆಯುಳ್ಳ ಈ ಷೋನ ಪ್ರೀಮಿಯರ್ ಬಿಡುಗಡೆಯಾಗುತ್ತಿದ್ದಂತೆ ಕಾತರದಿಂದ ಕಾಯುತ್ತಿದ್ದ ಲಕ್ಷಾಂತರ ಅಭಿಮಾನಿಗಳೆಲ್ಲ ಒಟ್ಟಿಗೆ ವೆಬ್ಸೈಟ್ ನೋಡಿದ್ದಾರೆ. ಇದರ ಪರಿಣಾಮ ತಾಂತ್ರಿಕ ತೊಂದರೆಯುಂಟಾಗಿ ಎಚ್ ಬಿಓ ವೆಬ್ಸೈಟ್ ಕ್ರಾಷ್ ಆಗಿದೆ. ಪ್ರಿಮಿಯರ್ ನೋಡಲು ಬಯಸಿ HBO.com ವೆಬ್ಸೈಟ್ ನೋಡಿದವರಿಗೆಲ್ಲ ಕೆಲಕಾಲ ‘ Problem loading the page ‘ ಎಂಬ ಎರರ್ ಸಂದೇಶ ತೋರಿಸುತ್ತಿತ್ತು. ಕೆಲ ವೀಕ್ಷಕರು ಎರರ್ ಸಂದೇಶದ ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್ಬುಕ್ ಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕೆಲಹೊತ್ತಿನ ನಂತರ ತಾಂತ್ರಿಕ ಸಮಸ್ಯೆ ಬಗೆಹರಿದು ಅಭಿಮಾನಿಗಳಿಗೆ ಪ್ರೀಮಿಯರ್ ನ ಕೊನೆಯ ಭಾಗ ಮಾತ್ರ ನೋಡಲು ಸಾಧ್ಯವಾಯಿತು. ಸಿಂಹಾಸನಕ್ಕಾಗಿ ನಡೆಯುವ ರಾಜಕೀಯ ಷಡ್ಯಂತ್ರಗಳನ್ನು ತೋರಿಸುವ ಈ ಟಿವಿ ಷೋ ಇಲ್ಲಿಯವರೆಗೆ 6 ಸೀಸನ್ ಪ್ರಸಾರವಾಗಿದ್ದು, ಜನರ ಮನಗೆಲ್ಲುವಲ್ಲಿ ಸಫಲವಾಗಿದೆ ಎನ್ನಬಹುದು.

 

Comments are closed.

Social Media Auto Publish Powered By : XYZScripts.com