ಮಹಿಳಾ ಕ್ರಿಕೆಟ್ ವಿಶ್ವಕಪ್ : ದ. ಆಫ್ರಿಕಾವನ್ನು ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟ ಇಂಗ್ಲೆಂಡ್ ವನಿತೆಯರು

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್ ಜಯಗಳಿಸಿ ಫೈನಲ್ ತಲುಪಿದೆ. ಬ್ರಿಸ್ಟಲ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ಲಾರಾ ವೊಲ್ವಾರ್ಡ್ಟ್ (66) ಹಾಗೂ ಮಿಗ್ನನ್ ಡು ಪ್ರೀಜ್ (76) ಅರ್ಧಶತಕಗಳ ಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 218 ರನ್ ಮೊತ್ತ ಸೇರಿಸಿತು.

 

ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಸಾರಾ ಟೇಲರ್ (54), ಕ್ಯಾಪ್ಟನ್ ಹೀದರ್ ನೈಟ್ (30), ಫ್ರಾನ್ ವಿಲ್ಸನ್ (30) ರನ್ ಗಳಿಸಿ ತಂಡಕ್ಕೆ ಆಸರೆಯಾದರು. 49.4  ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿ ಆತಿಥೇಯ ತಂಡ ಗೆಲುವಿನ ದಡ ಸೇರಿತು. ಅರ್ಧಶತಕ ಬಾರಿಸಿ ಇಂಗ್ಲೆಂಡ್ ಗೆಲುವಿಗೆ ಕಾರಣರಾದ ಸಾರಾ ಟೇಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

2 thoughts on “ಮಹಿಳಾ ಕ್ರಿಕೆಟ್ ವಿಶ್ವಕಪ್ : ದ. ಆಫ್ರಿಕಾವನ್ನು ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟ ಇಂಗ್ಲೆಂಡ್ ವನಿತೆಯರು

  • October 16, 2017 at 5:00 PM
    Permalink

    Thank you so much for providing individuals with an extraordinarily terrific opportunity to read critical reviews from this site. It is usually very pleasing plus stuffed with a great time for me and my office co-workers to search your web site nearly three times every week to read through the new secrets you will have. And lastly, I’m so always motivated considering the perfect inspiring ideas served by you. Some 4 tips in this posting are indeed the simplest we have all had.

Comments are closed.

Social Media Auto Publish Powered By : XYZScripts.com