ವಿಂಬಲ್ಡನ್ ಗ್ರಾಂಡ್ ಸ್ಲಾಂ : ರೋಜರ್ ಫೆಡರರ್ ಪುರುಷರ ಸಿಂಗಲ್ಸ್ ಚಾಂಪಿಯನ್

ವಿಂಬಲ್ಡನ್ ಗ್ರಾಂಡ್ ಸ್ಲಾಂ ನ ಪುರುಷರ ಸಿಂಗಲ್ಸ್  ಫೈನಲ್ ನಲ್ಲಿ ರೋಜರ್ ಫೆಡರರ್, ಮರಿನ್ ಸಿಲಿಕ್ ವಿರುದ್ಧ 6-3, 6-1, 6-4 ರಿಂದ ನೇರ ಸೆಟ್ ಗಳಲ್ಲಿ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರವಿವಾರ, ಸೆಂಟರ್ ಕೋರ್ಟ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮರಿನ್ ಸಿಲಿಕ್ ಅವರಿಗೆ ಯಾವುದೇ ರೀತಿಯ ಗೆಲುವಿನ ಅವಕಾಶಗಳನ್ನು ನೀಡದೆ, ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ರೋಜರ್ ಫೆಡರರ್ ಅವರಿಗೆ ಇದು 8 ನೇ ವಿಂಬಲ್ಡನ್ ಹಾಗೂ 19 ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯಾಗಿದೆ.

 

ಅತಿ ಹೆಚ್ಚು ಬಾರಿ (8 ಸಲ) ವಿಂಬಲ್ಡನ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿರುವ 35 ವರ್ಷದ ರೋಜರ್, ವಿಂಬಲ್ಡನ್ ಚಾಂಪಿಯನ್ ಆದ ಹಿರಿಯ ಆಟಗಾರ ಸಹ ಎನಿಸಿಕೊಂಡಿದ್ದಾರೆ. ಇಡೀ ಟೂರ್ನಮೆಂಟ್ ನಲ್ಲಿ ರೋಜರ್ ಒಂದೇ ಒಂದು ಸೆಟ್ ಸೋಲದೇ ಅಜೇಯರಾಗುಳಿದಿರುವುದು ವಿಶೇಷ. ರೋಜರ್ ತಮ್ಮ 21, 22, 23, 24, 25, 27, 30 ಹಾಗೂ ಈಗ 35 ನೆಯ ವಯಸ್ಸಿನಲ್ಲಿ ಒಟ್ಟು 8 ಬಾರಿ ವಿಂಬಲ್ಡನ್ ಗೆಲುವು ಸಾಧಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ರೋಜರ್ ಫೆಡರರ್, ಫೈನಲ್ ನಲ್ಲಿ ರಫೆಲ್ ನಡಾಲ್ ಅವರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದರು.

3 thoughts on “ವಿಂಬಲ್ಡನ್ ಗ್ರಾಂಡ್ ಸ್ಲಾಂ : ರೋಜರ್ ಫೆಡರರ್ ಪುರುಷರ ಸಿಂಗಲ್ಸ್ ಚಾಂಪಿಯನ್

 • October 20, 2017 at 7:00 PM
  Permalink

  Simply desire to say your article is as astonishing. The clearness for your post is simply spectacular and i could think you are knowledgeable on this subject. Fine with your permission allow me to grab your feed to keep updated with coming near near post. Thanks one million and please carry on the gratifying work.|

 • October 21, 2017 at 3:21 AM
  Permalink

  Hey, I think your site might be having browser compatibility issues. When I look at your blog in Ie, it looks fine but when opening in Internet Explorer, it has some overlapping. I just wanted to give you a quick heads up! Other then that, excellent blog!|

 • October 25, 2017 at 10:29 AM
  Permalink

  I’m really loving the theme/design of your site. Do you ever run into any internet browser compatibility issues?
  A few of my blog audience have complained about my website not operating correctly in Explorer but looks great in Safari.
  Do you have any suggestions to help fix this issue?

Comments are closed.

Social Media Auto Publish Powered By : XYZScripts.com