ರಾಷ್ಟ್ರಪತಿ ಚುನಾವಣೆ : ವಿಧಾನಸೌಧದಲ್ಲಿ 223 ಶಾಸಕರಿಂದ ಶಾಂತಿಯುತ ಮತದಾನ

ಬೆಂಗಳೂರು : ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ಇಂದು ಮತದಾನ ನಡೆದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಶಾಂತಿಯುತ ಮತದಾನ ನಡೆದಿದೆ. ವಿಧಾನ ಸೌಧದಲ್ಲಿ 224 ಶಾಸಕರು ಹಾಗೂ ಒಬ್ಬ ಸಂಸದ ಸೇರಿ 225 ಮತಗಳಿದ್ದು, ಇದುವರೆಗೂ ಒಬ್ಬ ಸಂಸದ ಸೇರಿದಂತೆ 223 ಶಾಸಕರು ಮತದಾನ ಮಾಡಿದ್ದಾರೆ. ಚೆಲವರಾಯಸ್ವಾಮಿ, ವೈ ಎಸ್‌ ವಿ ದತ್ತಾ ಬೆಂಗಳೂರಿನಲ್ಲಿ ಇಲ್ಲದ ಕಾರಣ ಇಬ್ಬರು ಶಾಸಕರು ಮತದಾನ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ವಿಧಾನ ಸೌಧದಲ್ಲಿನ ರಾಷ್ಟ್ರಪತಿ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ. ಈ ಕುರಿತು ನಡೆದ ಚುನಾವಣಾ ಬೆಳವಣಿಗೆಗಳ ಬಗ್ಗೆ ಆಯೋಗದ ಗಮನಕ್ಕೆ ತರಲಾಗಿದೆ. ರಾಷ್ಟ್ರಪತಿ ಚುನಾವಣೆ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆದಿದೆ. 222 ಶಾಸಕರು ಹಾಗೂ ಒಬ್ಬ ಸಂಸದರು ಇಲ್ಲಿ ಮತ ಚಲಾಯಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿಯೂ ಆದ ವಿಧಾನ ಸಭೆ ಕಾರ್ಯದರ್ಶಿ ಎಸ್. ಮೂರ್ತಿ ಹೇಳಿದ್ದಾರೆ.
ಜೊತೆಗೆ ನಾನೇ ಖುದ್ದಾಗಿ ಇಬ್ಬರು ಸಿಬ್ಬಂದಿಯೊಂದಿಗೆ ಮತಪೆಟ್ಟಿಗೆಯನ್ನು ಇಂದೇ ದೆಹಲಿಗೆ ಕೊಂಡೊಯ್ದು ಚುನಾವಣಾಧಿಕಾರಿ ಸುಪರ್ದಿಗೆ ಒಪ್ಪಿಸುವುದಾಗಿ ಹೇಳಿದ್ದಾರೆ.

4 thoughts on “ರಾಷ್ಟ್ರಪತಿ ಚುನಾವಣೆ : ವಿಧಾನಸೌಧದಲ್ಲಿ 223 ಶಾಸಕರಿಂದ ಶಾಂತಿಯುತ ಮತದಾನ

 • October 20, 2017 at 6:11 PM
  Permalink

  Great post. I used to be checking continuously this weblog and I am inspired! Extremely useful information specifically the last part 🙂 I care for such info much. I used to be looking for this particular information for a very lengthy time. Thank you and best of luck. |

 • October 20, 2017 at 6:40 PM
  Permalink

  Pretty nice post. I just stumbled upon your weblog and wanted to say that I have really enjoyed browsing your blog posts.

  After all I’ll be subscribing to your feed and
  I hope you write again very soon!

 • October 21, 2017 at 12:15 AM
  Permalink

  Hi there very cool blog!! Man .. Excellent .. Wonderful .. I’ll bookmark your blog and take the feeds additionally? I am happy to find a lot of helpful info here within the put up, we’d like develop more techniques on this regard, thanks for sharing. . . . . .|

 • October 21, 2017 at 4:29 AM
  Permalink

  I have read so many content on the topic of the blogger lovers but this paragraph is in fact a good article, keep it up.

Comments are closed.

Social Media Auto Publish Powered By : XYZScripts.com