ಚೀನಾ ಬಾಯಿಮುಚ್ಚಿಕೊಂಡು ಭಾರತದ ಪ್ರಗತಿಯನ್ನು ನೋಡಲಿ : ಚೀನಾ ಪತ್ರಿಕೆ

ಬೀಜಿಂಗ್‌ : ಭಾರತಕ್ಕೆ ಸಾಕಷ್ಟು ವಿದೇಶಿ ಬಂಡವಾಳ  ಹರಿದುಬರುತ್ತಿದ್ದು, ಭಾರತ ಆರ್ಥಿಕವಾಗಿ, ಸಾಮಾಜಿಕವಾಗಿ ಸಧೃಢಗೊಳ್ಳುತ್ತಿದೆ. ಅಲ್ಲದೆ ಉತ್ಪಾದನಾ ವಲಯವೂ ವಿಸ್ತಾರಗೊಳ್ಳುತ್ತಿದೆ. ಇದನ್ನು ಚೀನಾ ಸಮಾಧಾನದಿಂದ ನೋಡಿ, ಅದಕ್ಕಿಂತ ಹೆಚ್ಚು ಪರಿಣಾಮಕಾರಿ ತಂತ್ರ ರೂಪಿಸಿ ಅಬಿವೃದ್ಧಿ ಹೊಂದಬೇಕು ಎಂದು ಚೀನಾ ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ಚೀನಾ ಸರ್ಕಾರಕ್ಕೆ ಸೂಚಿಸಿದೆ. 

ಭಾರತಕ್ಕೆ ಸಾಕಷ್ಟು ವಿದೇಶಿ ಬಂಡವಾಳ ಹರಿದುಬರುತ್ತಿದ್ದು, ಭಾರತದ ಆರ್ಥಿಕತೆ, ಉದ್ಯೋಗ ಸೃಷ್ಠಿ, ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ವರದಿಯಲ್ಲಿ ತಿಳಿಸಿದೆ. ಜೊತೆಗೆ ಭಾರತದ ಅಭಿವೃದ್ಧಿಯನ್ನು ಚೀನಾ ಸಮಾಧಾನದಿಂದ ನೋಡುತ್ತಾ, ಭಾರತಕ್ಕೆ ಸ್ಪರ್ಧೆ ಒಡ್ಡುವಂತೆ ಬೆಳೆಯುವತ್ತ ಗಮನಹರಿಸಬೇಕು ಎಂದಿದೆ.

 ವಿದೇಶಿ ಬಂಡವಾಳ ಹೂಡಿಕೆ ಭಾರತದ ಆಂತರಿಕ ದೌರ್ಬಲ್ಯಗಳನ್ನು ಬಗೆಹರಿಸಿ, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಚೀನಾ ಮೂಲದ ಕಂಪೆನಿಗಳು ಕೂಡಾ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ವಿಶೇಷ. ಇದೇ ಕಾರಣಕ್ಕೆ ಚೀನಾ ಭಾರತದ ಪ್ರಗತಿಯನ್ನು ಕಾದು ನೋಡುತ್ತ ಅದಕ್ಕೆ ಪ್ರತಿಯಾಗಿ ಉತ್ಪಾದನಾಯನ್ನು ವಿಸ್ತರಿಸುವ ಕಾರ್ಯತಂತ್ರ ಅನುಸರಿಸಬೇಕು ಎಂದಿದೆ.

ಭಾರತದಲ್ಲಿ ಬಂಡವಾಳ ಕೊರತೆ, ಕೌಶಲ್ಯಯುತ ಉತ್ಪಾದನಾ ಕಾರ್ಮಿಕರು, ವಿದೇಶಿ ಬಂಡವಾಳ ಹೂಡಿಕೆಯಂಥ ಸಮಸ್ಯೆಗಳು ಈಗ ಬಗೆಹರಿದಿದ್ದು, ಪ್ರಧಾನಿ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ಸಹಕಾರಿಯಾಗಿದೆ ಎಂದು ಗ್ಲೋಬಲ್ ಟೈಮ್ಸ್  ವರದಿ ಮಾಡಿದೆ. 

Comments are closed.

Social Media Auto Publish Powered By : XYZScripts.com