wimbledon 2017 : ಇತಿಹಾಸ ನಿರ್ಮಿಸುವ ಕನಸಿನಲ್ಲಿ ರೋಜರ್​​ ಫೆಡರರ್…

ದಾಖಲೆಯ ಗ್ರ್ಯಾನ್​ ಸ್ಲಾಮ್​ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿರುವ ಸ್ವಿಸ್​​ ರೋಜರ್​​ ಫೆಡರರ್ ಮತ್ತೊಂದು ಇತಿಹಾಸ ನಿರ್ಮಿಸುವ ಕನಸಿನಲ್ಲಿದ್ದಾರೆ.. ಭಾನುವಾರ ನಡೆಯುವ ಪುರುಷರ ಸಿಂಗಲ್ಸ್​ ವಿಂಬಲ್ಡನ್​ ಟೂರ್ನಿಯಲ್ಲಿ ಫೆಡರರ್​​, ಜೆಕ್​ ಗಣರಾಜ್ಯದ ಮಾರಿನ್​ ಸಿಲಿಕ್​ರನ್ನು ಮಣಿಸಿದ್ರೆ ಅಮೆರಿಕದ ಪೀಟರ್​ ಸ್ಯಾಂರ್ಪಸ್​ ದಾಖಲೆಯನ್ನು ಅಳಸಿ ಹೊಸ ದಾಖಲೆ ನಿರ್ಮಿಸಲಿದ್ದಾರೆ..
ಪ್ರಸಕ್ತ ವರ್ಷದ ಮೊದಲ ಗ್ರ್ಯಾನ್​ ಸ್ಲ್ಯಾಮ್​ ಆಸ್ಟ್ರೇಲಿಯನ್​ ಓಪನ್​ ಗೆದ್ದು, ಫ್ರೆಂಚ್​ ಓಪನ್​ನಿಂದ ಹೊರ ನಡೆದಿದ್ದ ಫೆಡರರ್​ 8ನೇ ಬಾರಿಗೆ ವಿಂಬಲ್ಡನ್​ ಕಿರೀಟ ಮುಡಿಗೇರಿಸಿಕೊಳ್ಳುವ ಕನಸಿನಲ್ಲಿದ್ದಾರೆ.. ಅಂಕಿ ಅಂಶಗಳ ಲೆಕ್ಕಾಚಾರದಲ್ಲೂ ಫೆಡರರ್​, ಸಿಲಿಕ್​ಗಿಂತಲೂ ಮೆಲಿದ್ದೂ ಇಂದಿನ ಪಂದ್ಯದಲ್ಲಿ ಸಿಲಿಕ್​ ಅವರನ್ನು ಸುಲಭವಾಗಿ ಹಣಿಯುವ ಪ್ಲಾನ್​ ಮಾಡಿಕೊಂಡಿದ್ದಾರೆ..
ಒಟ್ಟಾರೆ 18 ಗ್ರ್ಯಾನ್​ ಸ್ಲ್ಯಾಮ್​ಗಳನ್ನು ತೆಕ್ಕೆಗೆ ಹಾಕಿಕೊಂಡಿರುವ ಫೆಡರರ್​, ತಮ್ಮ ಮನೆಗೆ ಮತ್ತೊಬ್ಬ ಅತಿಥಿಯನ್ನು ಕರೆದುಕೊಂಡು ಹೋಗಲು ಯೋಜನೆಯನ್ನು ರೂಪಿಸಿದ್ದಾರೆ.. ತಮ್ಮ ನೈಜ ವೇಗದ ಹೊಡೆತ ಹಾಗೂ ಸರ್ವ್​​ಗಳ ಮೂಲಕ ಎದುರಾಳಿಯನ್ನು ಕಟ್ಟಿಹಾಕಲು ಫೆಡರರ್​ ರಣ ತಂತ್ರ ರೂಪಿಸಿಕೊಂಡಿದ್ದಾರೆ.. ಮಾಜಿ ವಿಶ್ವದ ನಂಬರ 1 ಆಟಗಾರರ ಫೆಡರರ್​ ಈ ಮೊದಲು 6 ಬಾರಿ ಸಿಲಿಕ್​​ ವಿರುದ್ಧ ಮುಖಾಮುಖಿಯಾಗಿದ್ದು, 5 ರಲ್ಲಿ ಮೆಲುಗೈ ಸಾಧಿಸಿದ್ದಾರೆ.. ಸ್ಟಾರ್​ ಆಟಗಾರರು ಲೀಗ್​ನಲ್ಲೇ ಹೊರ ಬಿದ್ದಿದ್ದರಿಂದ ಫೆಡರರ್​ ಮೇಲೆ ವಿಶ್ವಾಸ ಹೆಚ್ಚಿದೆ..
28ನೇ ಶ್ರೇಯಾಂಕಿತ ಜೆಕ್​ ಗಣರಾಜ್ಯದ ಸಿಲಿಕ್​ ಇದೇ ಮೊದಲ ಬಾರಿಗೆ ಟೂರ್ನಿಯ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ..  ಇದಕ್ಕೂ ಮೊದಲು ಸಿಲಿಕ್​ 2014ರಲ್ಲಿ ಯುಎಸ್​ ಓಪನ್​ ಪ್ರಶಸ್ತಿ ಗೆದ್ದು ಬೀಗಿದ್ದರು.. ಎರಡನೇ ಗ್ರ್ಯಾಂಡ್​ ಸ್ಲ್ಯಾಮ್​ ಕನಸಿನಲ್ಲಿರುವ ಸಿಲಿಕ್​, ಫೆಡರರ್​ ಹಣಿಯಲು ಯೋಜನೆ ಮಾಡಿದ್ದಾರೆ..

Comments are closed.

Social Media Auto Publish Powered By : XYZScripts.com