ಬಾಗಲಕೋಟೆ : ಶೌಚಾಲಯದಲ್ಲೇ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ

ಬಾಗಲಕೋಟೆ : ಶೌಚಕ್ಕೆಂದು ತೆರಳಿದ ಗರ್ಭಿಣಿಯೊಬ್ಬಳು ಶೌಚಾಲಯದಲ್ಲೆ ಗಂಡು ಮಗುವಿಗೆ ಜನ್ಮ ನೀಡಿದ ಅಚ್ಚರಿಯ ಘಟನೆ ಇಂದು ಬೆಳಗಿನ ಜಾವ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್‌ ಬಸ್‌ನಿಲ್ದಾಣದಲ್ಲಿ ನಡೆದಿದೆ. ನಿರ್ಮಲಾ ಹಡಪದ ಎಂಬುವರೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ. ನಿರ್ಮಲಾ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಣಿ ಗ್ರಾಮದವರು. ಪತಿ ಸಿದ್ದೇಶ ಜೊತೆ ದುಡಿಯಲು ಗೋವಾಕ್ಕೆ ತೆರಳಿದ್ದ ನಿರ್ಮಲಾ ಈ ನಡುವೆ ತನ್ನ ತಾಯಿ ಊರು ಹುನಗುಂದ ತಾಲೂಕಿನ ಕಂದಗಲ್ಲಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಶೌಚಕ್ಕೆ ತೆರಳಿದ್ದ ನಿರ್ಮಲಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದಲ್ಲದೇ ಶೌಚಾಲಯದ ಕೊಠಡಿಯಲ್ಲೇ ಹೆರಿಗೆಯೂ ಆಗಿದೆ. ಈ ವೇಳೆ ಶೌಚಕ್ಕೆ ತೆರಳಿದ್ದ ಇತರ ಮಹಿಳೆಯರು ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದು, ಹೆರಿಗೆ ನಂತರ 108 ಆ್ಯಂಬುಲೆನ್ಸ್‌ ಮೂಲಕ ಇಳಕಲ್‌ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ- ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಅವಧಿ ಪೂರ್ವ (ಏಳು ತಿಂಗಳು) ಹೆರಿಗೆ ಆಗಿದ್ದರಿಂದ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Comments are closed.

Social Media Auto Publish Powered By : XYZScripts.com