ಮನೆ ಕಟ್ಟಲು ಪಾಯ ಅಗೆದಾಗ ಪ್ರಾಚೀನ ಕಾಲದ ಚಿನ್ನಾಭರಣ ಪತ್ತೆ

ಬಳ್ಳಾರಿ: ತಾಲೂಕಿನ ಕುರುಗೋಡು ಗ್ರಾಮದಲ್ಲಿ ಆಶ್ರಯ ಮನೆ ಕಟ್ಟಲೆಂದು ತಳಪಾಯಕ್ಕಾಗಿ ಭೂಮಿ ಅಗೆದಾಗ ಅಲ್ಲಿ ಪ್ರಾಚೀನ ಕಾಲದ ಚಿನ್ನಾಭರಣ ದೊರೆತಿವೆ. ದೊರೆತಿರುವ ಎಲ್ಲ ಚಿನ್ನಾಭರಣಗಳನ್ನು ನಿವೇಶನದ ಮಾಲೀಕರು ಕಂದಾಯ ಇಲಾಖೆ ಅಧಿಕಾರಿಗಳಿಗೊಪ್ಪಿಸಿದ್ದಾರೆ.

ಕುರುಗೋಡು ಗ್ರಾಮದ ಮುಷ್ಟಗಟ್ಟೆ ರಸ್ತೆಯ ವಾಲ್ಮೀಕಿ ನಗರದ ನೀಲಮ್ಮ ಎಂಬ ಮಹಿಳೆ ಮೊದಲು ಗುಡಿಸಲಿನಲ್ಲಿ  ವಾಸವಾಗಿದ್ದಳು. ಆಕೆಗೆ ಆಶ್ರಯ ಮನೆ ಮಂಜೂರು ಆಗಿದ್ದರಿಂದ ಮನೆ ನಿರ್ಮಾಣಕ್ಕೆ ಭೂಮಿ ಅಗೆಯಲಾಗಿದೆ. ಈ ವೇಳೆ ಪುರಾತನ ಕಾಲದ ಚಿನ್ನಾಭರಣಗಳು ದೊರೆತಿವೆ.  ಇವುಗಳಲ್ಲಿ  59.47 ಗ್ರಾಂ ತೂಕವಿರುವ ಆರು ಚಿನ್ನದ ರಿಂಗ್, ಒಂದು ಲಕ್ಷ್ಮೀ  ಡಾಲರ್ ಮತ್ತು ಒಂದು ಬೆಳ್ಳಿಯ ಕಡಗ ದೊರೆತಿವೆ. ಇವನ್ನು ಪೊಲೀಸರ ಸಮ್ಮುಖದಲ್ಲಿ ಸ್ಥಳೀಯ ತಹಸೀಲ್ದಾರ್ ಅವರಿಗೆ ಒಪ್ಪಿಸಲಾಗಿದೆ.  ದೊರೆತಿರುವ ಆಭರಣಗಳು ಯಾವ ಕಾಲಕ್ಕೆ ಸೇರಿದ್ದವು ಎಂಬುದನ್ನು  ಇವು ಯಾವ  ಕಾಲಕ್ಕೆ ಸೇರಿದ್ದವು ಎಂಬುದನ್ನು ಪ್ರಾಚ್ಯವಸ್ತು ತಜ್ಞರು ಪರಿಶೀಲಿಸಬೇಕಿದೆ.

ಈ ಹಿಂದೆ ಕುರುಗೋಡು ಹೊಯ್ಸಳರು. ಚಾಲುಕ್ಯರು, ನಂತರ ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಅಂದಿನ ಅನೇಕ ಚಿನ್ನಾಭರಣ ಆಗಿಂದಾಗ್ಗೆ ಹಳೇ ಊರಿನ ಬುನಾದಿಗಳಲ್ಲಿ ದೊರೆಯುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಬಹುತೇಕರು ಇಂತಹವು ದೊರೆತರೆ ಯಾರಿಗೂ ತಿಳಿಯಂದಂತೆ ತಾವೇ ಇಟ್ಟುಕೊಳ್ಳುತ್ತಾರೆ. ಇತರರಿಗೆ ಗೊತ್ತಾದ ತಕ್ಷಣ ಹೀಗೆ ಪೊಲೀಸ್ , ಕಂದಾಯ ಅಧಿಕಾರಿಗಳಿಗೆ ಒಪ್ಪಿಸುತ್ತಾರೆ ಎಂದು ಹೇಳಲಾಗಿದೆ.

Comments are closed.

Social Media Auto Publish Powered By : XYZScripts.com