ಸುರಕ್ಷಾ ಸಾಧನಗಳಿಲ್ಲದೆ ಮ್ಯಾನ್ ಹೋಲ್‌ ಕ್ಲೀನಿಂಗ್‌ : ಸಾರ್ವಜನಿಕರ ಆಕ್ಷೇಪ

ಬಳ್ಳಾರಿ: ಮ್ಯಾನ್‍ಹೋಲ್‍ಗಳನ್ನು ಸಫಾಯಿ ಕರ್ಮಚಾರಿಗಳಿಂದ ಸ್ವಚ್ಚಮಾಡದೆ, ಯಂತ್ರಗಳಿಂದಲೇ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಜಿಲ್ಲೆಯ ಹೊಸಪೇಟೆಯಲ್ಲಿ ಮಾತ್ರ ಯಾವುದೇ ಸುರಕ್ಷಾ ಸಾಧನಗಳಿಲ್ಲದೆ ಸಫಾಯಿ ಕರ್ಮಚಾರಿಗಳಿಂದ ಮ್ಯಾನ್‍ಹೋಲ್ ಕ್ಲೀನಿಂಗ್ ಮಾಡಿಸಲಾಗಿದೆ. ಹೊಸಪೇಟೆಯ ಮೃತ್ಯುಂಜಯನಗರದ 9 ನೇ ಕ್ರಾಸ್‍ನಲ್ಲಿ ಒಳಚರಂಡಿಯನ್ನು ಸ್ವಚ್ಛಗೊಳಿಸಲು ಕಾರ್ಮಿಕರು ಮಾಸ್ಕ್, ಗ್ಲೌಸ್, ಶೂ ಯಾವುದೇ ಸುರಕ್ಷಾ ಸಾಧನಗಳನ್ನು ತೊಡದೆ ಇಳಿದಿದ್ದಾರೆ. ಈ ರೀತಿ ಮಾಡುವುದರಿಂದ ಸಫಾಯಿ ಕರ್ಮಚಾರಿಗಳು ಕಿರಿ ವಯಸ್ಸಿನಲ್ಲೀಯೇ ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಸ್ವಚ್ಚಮಾಡುವಾಗ ವಿಷಾನಿಲದಿಂದ ಒಮ್ಮೊಮ್ಮೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಆದರೂ ಇಲ್ಲಿನ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ನಗರಸಭೆಯಲ್ಲಿ ಒಳ ಚರಂಡಿಯಲ್ಲಿನ ಮಲ ಮೂತ್ರ ಎತ್ತುವ ಯಂತ್ರ ಇದ್ದರೂ ಈ ರೀತಿ ಮಾಡುತ್ತಿರುವುದರ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Comments are closed.

Social Media Auto Publish Powered By : XYZScripts.com