ಡ್ರಾಪ್‍ ನೀಡುವ ನೆಪದಲ್ಲಿ ಪತಿ ಎದುರೇ ಪತ್ನಿಯ ಅತ್ಯಾಚಾರ ನಡೆಸಿದ ದುರುಳರು

 ಚಿತ್ರದುರ್ಗ:  ಡ್ರಾಪ್ ನೀಡುವ ನೆಪದಲ್ಲಿ ಪತಿ ಎದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಚಿನ್ನಾಭರಣ, ನಗದು, ಮೊಬೈಲ್, ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟನೆ ಹೊಸದುರ್ಗ ತಾಲೂಕಿನ ಪುರ ಗ್ರಾಮದ ಹತ್ತಿರ ನಡೆದಿದೆ.

ಕುಟುಂಬದ ವೃದ್ದೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಊರಿಗೆ ಹೋಗಲು ಹೊಸದುರ್ಗ ಪಟ್ಟಣದ ಹೊರವಲಯದ ರಸ್ತೆ ಬದಿ ವಾಹನ ಕಾಯುತ್ತಿದ್ದ ಮಹಿಳೆಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿ ದುಷೃತ್ಯ ಎಸಗಿದ್ದಾರೆ. ಪತಿಯನ್ನು ಕಟ್ಟಿಹಾಕಿ ಆತನೆದುರೆ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಚಿನ್ನಾಭರಣ ಮತ್ತು ನಗದು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಬೇಕಾದ ಹೊಸದುರ್ಗ ಪೊಲೀಸರು ಮಿನಮೇಷ ಎಣಿಸಿದ್ದರೆಂದು ತಿಳಿದು ಬಂದಿದೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 thoughts on “ಡ್ರಾಪ್‍ ನೀಡುವ ನೆಪದಲ್ಲಿ ಪತಿ ಎದುರೇ ಪತ್ನಿಯ ಅತ್ಯಾಚಾರ ನಡೆಸಿದ ದುರುಳರು

Comments are closed.

Social Media Auto Publish Powered By : XYZScripts.com