ರಾಜ್ಯದಲ್ಲಿ ಬಿಜೆಪಿ ನಾಯಕರಿಂದ ಕಾನೂನು ಭಂಗ : ವಿ.ಎಸ್‌ ಉಗ್ರಪ್ಪ

ಬೆಳಗಾವಿ : ರಾಜ್ಯದಲ್ಲಿ ಬಿಜೆಪಿ ನಾಯಕರಿಂದ ಕಾನೂನು ಭಂಗವಾಗಿದೆ. ಬೆಂಕಿ ಹಚ್ಚುವ, ಷಂಡರು ಮುಂತಾದ ಪದ ಬಳಸಿ ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ವಿ.ಎಸ್‌ ಉಗ್ರಪ್ಪ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆಂಬ ಹತಾಶಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಹಾಗೂ ಯಡಿಯೂರಪ್ಪ ಅವರಿಗೆ ಇಂತಹ ಹೇಳಿಕೆ ಶೋಭೆ ತರುವುದಿಲ್ಲ. ಬೆಂಕಿ ಹಚ್ಚುವ ಮಾತನಾಡಿ ಸಾಮರಸ್ಯ ಕದಡುವ ಯತ್ನ ಮಾಡುತ್ತಿದ್ದಾರೆ. ಸಮಾಜ ಒಡೆದು ಆಳುವ ನೀತಿಯನ್ನ ಬಿಜೆಪಿ ನಾಯಕರು ಬಿಡಬೇಕು ಎಂದಿದ್ದಾರೆ. ಕೇಂದ್ರ ಕಾರಾಗೃಹದಲ್ಲಿ ಅವ್ಯವಹಾರ ಪ್ರಕರಣ ಕುರಿತಂತೆ ಹೇಳಿಕೆ ನೀಡಿರುವ ಉಗ್ರಪ್ಪ, ಇಬ್ಬರೂ ಅಧಿಕಾರಿಗಳು ಅಧಿಕಾರ ಇತಿಮಿತಿ ಮೀರಿ ವರ್ತಿಸುತ್ತಿದ್ದಾರೆ. ಇರುವ ಸೌಲಭ್ಯ ಮೀರಿ‌ ಹೆಚ್ಚಿನ ಸೌಲಭ್ಯ ನೀಡಿದ್ರೆ ಅದು ಅಧಿಕಾರಿಯ ತಪ್ಪು. ಸರ್ಕಾರ ಈ ಕುರಿತು ತನಿಖೆ ನಡೆಸಿ ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.

Comments are closed.