ಸಿಎಂಗೆ ದುಡ್ಡಿನ ಮದ, ಅಧಿಕಾರದ ಮದ ಹೆಚ್ಚಾಗಿದೆ : ಎಚ್‌.ಡಿ ಕುಮಾರಸ್ವಾಮಿ

ಬೆಂಗಳೂರು :  ಮುಖ್ಯಮಂತ್ರಿಗಳೇ ಉಸ್ತುವಾರಿ ವಹಿಸಿರುವ ಗೃಹ ಇಲಾಖೆಯ ದಿವಾಳಿತನವನ್ನು ಇಂದು ನೋಡುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಕೋಮುಗಲಭೆ ನಿರ್ವಹಣೆಯಲ್ಲಿಯೂ ಸರಕಾರ ವೈಫಲ್ಯ ಕಂಡಿದೆ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್, ಬಿಜೆಪಿ ನಾಯಕರ ನಡವಳಿಕೆಗಳು ವಿಶ್ವಾಸ ಮೂಡಿಸುತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳೂ ಸೌಹಾರ್ದತೆ ಕಾಪಾಡುತ್ತಿಲ್ಲ. ಜನಸಾಮಾನ್ಯರು ಆತಂಕದಿಂದ ಬದುಕು ಸಾಗಿಸಬೇಕು ಎನ್ನುವುದೇ ಎರಡೂ ಪಕ್ಷಗಳ ಉದ್ದೇಶವಾಗಿದೆ ಎಂದಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಜೆಡಿಎಸ್ ನಿಂದ ಸೌಹಾರ್ದತೆ ಮೂಡಿಸಲು ಪ್ರಯತ್ನ ನಡೆಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಬಯಲು ನಾಟಕ ಆರಂಭಿಸಿದ್ದಾರೆ ಎಂದಿರುವ ಎಚ್‌ಡಿಕೆ, ನಾನು ಸಿಎಂ ಆಗ್ಬೇಕು ಅಂತ ಕನಸು ಕಾಣ್ತಿದ್ದೇನೆ ಅಂತ ಸಿಎಂ ಹೇಳಿದ್ದಾರೆ. ಸಿದ್ದರಾಮಯ್ಯರಿಗೆ ದುಡ್ಡಿನ ಮದ, ಅಧಿಕಾರದ ಮದ ಹೆಚ್ಚಾಗಿದೆ ಎಂದಿದ್ದಾರೆ. ಪರಪ್ಪನ ಅಗ್ರಹಾರ ವಿಚಾರ ಕುರಿತಂತೆ ಹೇಳಿಕೆ ನೀಡಿರುವ ಎಚ್‌ಡಿಕೆ,  ಇಬ್ಬರು ಐಪಿಎಸ್ ಅಧಿಕಾರಿಗಳು ಸರ್ಕಾರದ ಮರ್ಯಾದೆ ತೆಗೆಯುತ್ತಿದ್ದಾರೆ. ಅಧಿಕಾರಿಗಳು ಮಾಧ್ಯಮದವರ ಮುಂದೆ ಹೇಳಿಕೆ ಕೊಡಲು ಯಾವ ನಿಯಮಗಳಲ್ಲಿ ಅವಕಾಶ ಇದೆ?  ಎಂದು ಪ್ರಶ್ನಿಸಿದ್ದಾರೆ.

Comments are closed.

Social Media Auto Publish Powered By : XYZScripts.com