ಸಿಎಂ ಬಾಯಿಗೆ ಬೀಗ ಹಾಕಿಕೊಂಡು ಕೆಲಸ ಮಾಡಿದರೆ ಒಳ್ಳೆಯದು : ಸದಾನಂದಗೌಡ ಹೇಳಿಕೆ

ಬೆಂಗಳೂರು : ಜಿಲ್ಲೆಯಲ್ಲಿ ಸ್ಫರ್ಧಿಸಲು ರಮಾನಾಥ ರೈ ಸವಾಲು ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.  ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೌಂಟರ್ ಕಾರ್ಯಾಚರಣೆಯನ್ನು ನಾವು ಮಾಡ್ತಿಲ್ಲ. ರಮಾನಾಥ್ ರೈ ವಿರುದ್ದ ಕಾರ್ಯಾಚರಣೆ ಮಾಡುವಂತಹ ಅವಶ್ಯಕತೆ ಇಲ್ಲ. ರಮಾನಾಥ್ ರೈ ಅವರನ್ನು ಬಂಟ್ವಾಳದಿಂದ ಉಚ್ಚಾಟನೆ ಮಾಡುವ ಕೆಲಸ ತನ್ನಿಂತಾನೆ ನಡೆಯುತ್ತದೆ ಎಂದಿದ್ದಾರೆ. ಬಂಟ್ವಾಳದಲ್ಲಿ ನಡೆಯುತ್ತಿರುವ ಗಲಭೆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಸದಾನಂದಗೌಡ,  ಆರೋಪಿಗಳ ಬಂಧನ ಮತ್ತು ಬಿಡುಗಡೆಯ ನಾಟಕ ನಡೆಯುತ್ತಿದೆ. ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿ ರಾಜ ಗೌರವ ಕೊಟ್ಟು ಬಿಡಿಸಿಕೊಂಡು ಹೋಗುವ ಕೆಲಸ ಕೂಡಾ ಆಗಿದೆ.  ನಾನು ಸಿಎಂಗೆ ಯಾವುದೇ ಆಗ್ರಹ ಮಾಡುವುದಿಲ್ಲ, ಯಾಕೆಂದರೆ ಅವರಿಂದ ಯಾವುದೇ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ ಎಂದಿದ್ದಾರೆ. ಹಲವು ಬಾರಿ ಸಿದ್ದರಾಮಯ್ಯ ಕಣ್ಣಿದ್ದು ಕುರುಡರಾಗಿ, ಕಿವಿಯಿದ್ದೂ ಕಿವುಡರಾಗಿ ವರ್ತನೆ ಮಾಡ್ತಾರೆ, ಆದರೆ ಬಾಯಿಗೆ ಬೀಗ ಹಾಕಲ್ಲ, ಸಿದ್ದರಾಮಯ್ಯ ಬಾಯಿಗೆ ಬೀಗ ಹಾಕಿ ಆಡಳಿತ ಮಾಡಿದ್ರೆ ಕರ್ನಾಟಕಕ್ಕೆ ಒಳ್ಳೆಯದಾಗಬಹುದು ಎಂದಿದ್ದಾರೆ.

Comments are closed.