ಉಡುಪಿ : ಸೈನೆಡ್‌ ಸೇವಿಸಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

ಉಡುಪಿ : ಸೈನೆಡ್ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ತಾಲ್ಲೂಕಿನ ಪಡುಬೆಳ್ಳೆಯಲ್ಲಿ  ನಡೆದಿದೆ. ಮೃತರನ್ನು  ಶಂಕರ ಆಚಾರ್ಯ (50),  ನಿರ್ಮಲ ಆಚಾರ್ಯ( 44),  ಶ್ರೇಯಾ( 22), ಶೃತಿ (23) ಎಂದು ಗುರುತಿಸಲಾಗಿದೆ. ಶಂಕರ್‌ ಪಡುಬೆಳ್ಳೆಯಲ್ಲಿ ಜ್ಯುವೆಲ್ಲರಿ ಶಾಪ್‌ ಇಟ್ಟು ಕೊಂಡಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

 

 

 

Comments are closed.

Social Media Auto Publish Powered By : XYZScripts.com