ಝೀ ಕನ್ನಡದ ‘ನಿಗೂಢ ರಾತ್ರಿ’ಯಲ್ಲಿ ವಿಚಿತ್ರ ಘಟನೆಗಳ ಕಥಾನಕ !

ಕಾಲ ಅದೆಷ್ಟೇ ಮುಂದುವರೆದಿರಲಿ, ಆಧುನಿಕ ವಿಜ್ಞಾನ ಅದೇನೇ ಸಾಧನೆ ಮಾಡಿರಲಿ, ಇಂದಿಗೂ ಭೂತ-ದೆವ್ವ-ಅತೀಂದ್ರಿಯ ಶಕ್ತಿಗಳ ಇರುವಿಕೆಯ ಬಗ್ಗೆ ನಂಬಿಕೆ ಇರುವ ಜನರ ಸಂಖ್ಯೆ ದೊಡ್ಡದೇ ಇದೆ. ಅನೇಕರ ಜೀವನದ ಭಾಗವೇ ಆಗಿರುವ ಧಾರಾವಾಹಿಗಳ ಪ್ರಮುಖ ಪಾತ್ರಧಾರಿಗಳು ತಮ್ಮ ಬದುಕಿನಲ್ಲಿ ನಡೆದ ಇಂಥಹ ವಿವರಿಸಲಾಗದ ಕೆಲವು ಸನ್ನಿವೇಶಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಮಲೆನಾಡಿನ ಸುಂದರ ಹಳ್ಳಿಯ ಶ್ರೀಮಂತ ವ್ಯಕ್ತಿ ಸೂರ್ಯ ನಾರಾಯಣನ ಮನೆಯಲ್ಲಿ ಸರಣಿಯಾಗಿ ನಡೆಯುವ ವಿಚಿತ್ರ ಘಟನೆಗಳ ಕಥೆಯೇ “ನಿಗೂಢ ರಾತ್ರಿ”. ಸೂರ್ಯ ನಾರಾಯಣ ಮತ್ತು ಅವನ ಆರು ಜನ ಮಕ್ಕಳಿರುವ ಮನೆಯಲ್ಲಿ ಸರಮಾಲೆಯಂತೆ ಒಂದರ ಮೇಲೊಂದು ಅನುಮಾನಾಸ್ಪದ ಘಟನೆಗಳು ನಡೆಯುತ್ತವೆ. ಮನೆಯ ಹಿರಿಯ ವ್ಯಕ್ತಿ ಸೂರ್ಯ ನಾರಾಯಣನ ಅನಿರೀಕ್ಷಿತ ಸಾವು, ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡುತ್ತದೆ. ಮನೆಯ ಸುತ್ತಲು ಸುತ್ತುತಿದ್ದ ಪ್ರೇತಾತ್ಮವೇ ಸೂರ್ಯ ನಾರಾಯಣನನ್ನು ಬಲಿ ತೆಗೆದು ಕೊಂಡಿದೆ ಎಂದೇ ನಂಬುವ ಮನೆಯವರು, ಈ ಎಲ್ಲಾ ಸಮಸ್ಯೆಗಳಿಂದ ಹೇಗೆ ಪಾರಾಗುತ್ತಾರೆ ಮತ್ತು ನಡೆಯುತ್ತಿರುವ ಕಲ್ಪನೆಗೂ ನಿಲುಕದ ಭಯಾನಕ ಚಟುವಟಿಕೆಗಳನ್ನು ಹೇಗೆ ತಡೆಯುತ್ತಾರೆ ಎಂಬ ಕತೂಹಲಕಾರಿ ಚಿತ್ರ ಕಥೆಯೊಂದಿಗೆ ಈ ಧಾರಾವಾಹಿ ಮೂಡಿ ಬರಲಿದೆ.

ಸ್ಮಶಾನದ ಸದ್ದು ಕೇಳಿ ಬೆಚ್ಚಿಬಿದ್ದ ಜೋಡಿ ಹಕ್ಕಿಯ ರಾಮಣ್ಣ

ಝೀ ವಾಹಿನಿಯ ಜೋಡಿಹಕ್ಕಿ ಧಾರಾವಾಹಿ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ. ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಾಮಣ್ಣ ತಮಗಾದ ನಿಗೂಢ ಅನುಭವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಪಿಯುಸಿ ಓದುತ್ತಿದ್ದಾಗ ಹಳ್ಳಿಯಲ್ಲಿರುವ ತಮ್ಮ ಮಾವನ ಮನೆಗೆ ಹೋಗಿದ್ದರಂತೆ. ಅಲ್ಲಿ ತಮ್ಮ ನೆಚ್ಚಿನ ಹೋಟೆಲಿನಲ್ಲಿ ಇಡ್ಲಿ ಸವಿದು ಸ್ಮಶಾನದ ಬಳಿಯೇ ಇರುವ ದಾರಿಯಲ್ಲಿ ನಡುರಾತ್ರಿ ಹೊತ್ತಿನಲ್ಲಿ ಮನೆಗೆ ಮರಳುತ್ತಿದ್ದರು. ಆಗ ಯಾರೋ ಕೂಗಿದ ಸದ್ದು ಕೇಳಿ ಬೆಚ್ಚಿಬಿದ್ದರು. ಸುತ್ತ ಯಾರೂ ಇಲ್ಲದಿದ್ದರೂ ಸದ್ದು ಬಂದಿದ್ದು ಎಲ್ಲಿಂದ ಎಂದು ತಿಳಿಯದೆ ಜೀವ ಬಾಯಿಗೆ ಬಂದಂತಾಗಿ ಅಲ್ಲಿಂದ ಓಡಲು ಶುರುಮಾಡಿದವರು ಮನೆ ತಲುಪಿ ಬಾಗಿಲು ಹಾಕಿದ ಮೇಲೆಯೇ ನಿಂತಿದ್ದಂತೆ. ಇಂದಿಗೂ ಆ ಸನ್ನಿವೇಶ ನೆನೆಸಿಕೊಂಡರೆ ಮೈ ಜುಂ ಎನ್ನುತ್ತೆ ಎನ್ನುತ್ತಾರೆ ರಾಮಣ್ಣ.

ಪತ್ತೆದಾರಿ ಪ್ರತಿಭಾಗೂ ಕಾಡಿದ ಭಯಾನಕ ಅನುಭವ

ಇನ್ನು ಎಲ್ಲರ ನೆಚ್ಚಿನ ಪತ್ತೆದಾರಿ ಪ್ರತಿಭಾ ಧಾರಾವಾಹಿಯ ನಾಯಕಿ ಪ್ರತಿಭಾಗೂ ಇದೇ ಥರದ ಅನುಭವ ಆಗಿತ್ತಂತೆ. ಆಂಧ್ರಪ್ರದೇಶದ ಚಿಕ್ಕ ಹಳ್ಳಿ ಕಾವೇರಿರಾಜಪುರಂ ಪ್ರತಿಭಾ ಹುಟ್ಟೂರು. ಆ ಊರಿನ ನಡುವಿನಲ್ಲಿ ದೊಡ್ಡದೊಂದು ಬಾವಿಯಿದೆ. ಊರ ಮಕ್ಕಳೆಲ್ಲಾ ಮುಂಜಾನೆಯಿಂದ ಮಧ್ಯಾಹ್ನ 12ಗಂಟೆಯವರೆಗೂ ಆ ಬಾವಿಯ ಬಳಿ ಈಜೋಕೆ, ಆಟವಾಡೋಕೆ ಹೋಗುತ್ತಲೇ ಇರ್ತಾರೆ. ಆದ್ರೆ ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆ ಎಲ್ಲಾ ಮಕ್ಕಳನ್ನೂ ಬಾವಿಯಿಂದ ಹೊರಬಂದು ಮನೆಯೊಳಗೆ ಇರುವಂತೆ ಹೇಳಲಾಗುತ್ತೆ. ಯಾಕಂದ್ರೆ ಹಿಂದೆ ಯುವತಿಯೊಬ್ಬಳು ಆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳಂತೆ. ಆಕೆಯ ಆತ್ಮ ಬಾವಿಯ ಸುತ್ತಲೇ ಅಡ್ಡಾಡುತ್ತಿರುತ್ತದೆ ಎನ್ನುವ ನಂಬಿಕೆ ಅಲ್ಲಿನ ಜನರದ್ದು. ಇಂದಿಗೂ ವರ್ಷಕ್ಕೆರಡು ಬಾರಿ ಆ ಯುವತಿಯ ಶ್ರಾದ್ಧವನ್ನು ಬಾವಿಯ ಬಳಿ ಮಾಡುತ್ತಾರೆ. ಪೂಜೆ ಮುಗಿದ ಕೂಡಲೇ ಯಾರೋ ಬಾವಿಗೆ ಹಾರಿದ ಸದ್ದು ಕೇಳುತ್ತದೆ, ನೀರಿನಲ್ಲಿ ಮೂಡಿದ ಅಲೆಯ ಹೊರತಾಗಿ ಅಲ್ಲಿ ಯಾರೂ ಕಾಣಿಸುವುದಿಲ್ಲ. ಇಂದಿಗೂ ಆ ಸದ್ದಿನ ಬಗ್ಗೆ ಪ್ರತಿಭಾಗೆ ಅಚ್ಚರಿ ಬೆರೆತ ಭಯ ಇದೆಯಂತೆ.

ನಾಗಿಣಿ ಜೊತೆ ಇರುವ ಅರ್ಜುನ್ಗೂ ಕಲ್ಲು ಎಸೆದ ಭೂತ!!

ನಾಗಿಣಿ ಧಾರಾವಾಹಿಯ ಮುಖ್ಯ ಪಾತ್ರಧಾರಿ ಅರ್ಜುನ್ ತಾವು ಹೈಸ್ಕೂಲಿನಲ್ಲಿದ್ದಾಗ ನಡೆದ ಸನ್ನಿವೇಶವೊಂದನ್ನು ನೆನಪಿಸಿಕೊಳ್ತಾರೆ. ಅರ್ಜುನ್ ತಮ್ಮ ಅಣ್ಣನ ಜೊತೆ ಕುಂದಾಪುರದಲ್ಲಿದ್ದ ತಮ್ಮ ತೋಟದಲ್ಲಿ ಒಂದ್ಸಲ ರಾತ್ರಿ ವೇಳೆ ಪಂಪ್ ಸೆಟ್ ಆನ್ ಮಾಡಿ ಬರಲು ಹೋಗಿದ್ರಂತೆ. ಸಾಮಾನ್ಯವಾಗಿ ಕತ್ತಲಲ್ಲಿ ಮಕ್ಕಳನ್ನು ಕಳಿಸದ ಮನೆಯವರು ಅಂದು ಮಾತ್ರ ಬೇರೆ ಯಾರೂ ಇಲ್ಲ ಎಂದು ಇವರನ್ನೇ ಕಳಿಸಿದ್ದರು. ಇನ್ನೇನು ಪಂಪ್ ಸೆಟ್ ಶುರುಮಾಡಬೇಕು ಎನ್ನುವಷ್ಟರಲ್ಲಿ ಯಾರೋ ಜೋರಾಗಿ ಕೂಗಿಕೊಂಡು ಕಲ್ಲುಗಳನ್ನು ಇವರ ಮೇಲೆ ಎಸೆಯೋಕೆ ಶುರುಮಾಡಿದ್ರಂತೆ. ಕೈಯಲ್ಲಿದ್ದ ಟಾರ್ಚ್ ಬೆಳಕು ಹಾಕಿ ನೋಡಿದ್ರೆ ಯಾರೋ ವ್ಯಕ್ತಿ ಕೈಯಲ್ಲಿ ಕಲ್ಲು ಹಿಡಿದು ತಮ್ಮತ್ತಲೇ ಓಡಿಬರುತ್ತಿರುವುದನ್ನು ಅರ್ಜುನ್ ನೋಡಿ ಗಾಬರಿಯಾದ್ರಂತೆ. ಅಣ್ಣನಿಗೆ ತೋರಿಸೋಕೆ ಮತ್ತೆ ಟಾರ್ಚ್ ಆನ್ ಮಾಡಿದ್ರೆ ಅಲ್ಲಿ ಯಾರೂ ಇರ್ಲಿಲ್ಲ. ಆದ್ರೆ ಕಲ್ಲುಗಳು ಮಾತ್ರ ನಿರಂತರವಾಗಿ ಇವರಿಬ್ಬರ ಮೇಲೆ ಬೀಳುತ್ತಲೇ ಇದ್ದವಂತೆ. ಕ್ಷಣವೂ ಅಲ್ಲಿ ನಿಲ್ಲದೇ ಅಣ್ಣತಮ್ಮ ಇಬ್ಬರೂ ಅಲ್ಲಿಂದ ಕಾಲುಕಿತ್ತಿದ್ದಾರೆ. ಆದ್ರೆ ಇಂದಿಗೂ ಯಾರೂ ಕಾಣದೇ ಕೇವಲ ಶಬ್ದ ಮಾತ್ರ ಕೇಳಿಸಿದ್ದಲ್ಲದೇ ಕಲ್ಲುಗಳನ್ನು ತಮ್ಮ ಮೇಲೆ ಎಸೆಯುತ್ತಿದ್ದದು ಯಾರು ಎನ್ನುವುದನ್ನು ನೆನದರೆ ಒಂದು ಕ್ಷಣ ಬೆಚ್ಚಿಬೀಳುವಂತಾಗುತ್ತದೆ ಎನ್ನುತ್ತಾರೆ ಅರ್ಜುನ್.

ಜೋಡಿಹಕ್ಕಿ ಜಾನಕಿಗೆ ಕಂಡ ಮಣ್ಣಿನ ಹೆಜ್ಜೆ ಗುರುತು

ಜೋಡಿಹಕ್ಕಿ ಧಾರಾವಾಹಿಯ ಜಾನಕಿ ಟೀಚರ್ ಪಾತ್ರಧಾರಿ, ಉದಯೋನ್ಮುಖ ಪ್ರತಿಭೆ ಚೈತ್ರಾರದ್ದು ಮತ್ತೊಂದು ಮೈನವಿರೇಳಿಸುವ ಅನುಭವ. ಊರ ಹೊರಗಿದ್ದ ತಮ್ಮ ಶಾಲೆಯಲ್ಲಿ ಚೈತ್ರಾ ಪುಸ್ತಕಗಳನ್ನು ಮರೆದು ಬಂದಿದ್ರಂತೆ. ಅವುಗಳನ್ನು ವಾಪಸ್ಸು ತರಲು ಸಣ್ಣಗೆ ಸುರಿಯುತ್ತಿದ್ದ ಮಳೆಯಲ್ಲೇ ಹೋಗಿದ್ದಾರೆ. ಆದ್ರೆ ಇವರು ಶಾಲೆ ತಲುಪುವ ವೇಳೆಗೆ ಮಕ್ಕಳು, ಶಿಕ್ಷಕರು ಎಲ್ಲರೂ ಮನೆಗೆ ಹೋಗಿಬಿಟ್ಟಿದ್ರು. ಹೆಡ್ ಮಾಸ್ಟರ್ ಆದ್ರೂ ಇರಬಹುದು ಎಂದು ಭಾವಿಸಿ ಅವರ ಕೋಣೆಯ ಕಡೆ ಹೋದ ಚೈತ್ರಾಗೆ ಅಚ್ಚರಿ ಕಾದಿತ್ತು. ಯಾರೋ ಕೆಸರು ಮೆತ್ತಿದ ಕಾಲಿನಲ್ಲಿ ಹೆಡ್ ಮಾಸ್ಟರ್ ಕೋಣೆಯ ಬಾಗಿಲ ತನಕ ನಡೆದು ಹೋದ ಹೆಜ್ಜೆ ಗುರುತುಗಳಿದ್ದವು. ಆದರೆ ಕೋಣೆಯೊಳಗೆ ಹೋದದ್ದಾಗಲೀ, ಅಲ್ಲಿಂದ ವಾಪಸ್ ಹೋದ ಹೆಜ್ಜೆಗಳಾಗಲೀ ಇರಲೇ ಇಲ್ಲವಂತೆ. ಈ ಸನ್ನಿವೇಶ ನಡೆದ ಕೆಲವು ದಿನಗಳ ಮುಂಚೆಯಷ್ಟೇ ಜೋರಾದ ಗಾಳಿ ಮಳೆಗೆ ಚೈತ್ರಾ ಸ್ನೇಹಿತೆಯೊಬ್ಬಳು ಜೀವ ಕಳೆದುಕೊಂಡಿದ್ದಳಂತೆ. ಎಲ್ಲವೂ ಯಾಕೋ ಒಂದಕ್ಕೊಂದು ತಾಳೆ ಹಾಕಿದಂತಾಗಿ ಹೆದರಿಕೊಂಡ ಚೈತ್ರಾ ಒಂದು ಕ್ಷಣವೂ ನಿಲ್ಲದೇ ಮನೆಗೆ ಓಡಿ ಹೋದರಂತೆ.

ಇದು ಈ ಕಲಾವಿದರ ನೈಜ ಅನುಭವಗಳು. ಇಂಥದ್ದೇ ಅನೇಕ ಅನುಭವಗಳು ನಿಮಗೂ ಆಗಿರಬಹುದು. ಇಂತಹ ಜನರ ಅನುಭವಗಳನ್ನು ತೆರೆಮೇಲೆ ವಿಭಿನ್ನವಾಗಿ, ರೋಮಾಂಚಕಾರಿಯಾಗಿ ತರುವ ಪ್ರಯತ್ನವನ್ನು ಝೀ ಕನ್ನಡ ವಾಹಿನಿ ಮಾಡುತ್ತಿದ್ದು, ನಿಗೂಢತೆಯ ಕಥೆಯನ್ನು ಇಟ್ಟುಕೊಂಡು ನಿಗೂಢ ರಾತ್ರಿ ಧಾರಾವಾಹಿ ತೆರೆಯ ಮೇಲೆ ಮೂಡಿ ಬರಲು ಅಣಿಯಾಗಿದೆ.

ಇದೇ ಪ್ರಥಮ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಸಸ್ಪೆನ್ಸ್‌ ಥ್ರಿಲ್ಲರ್‌ ಧಾರಾವಾಹಿಯೊಂದು ಪ್ರತಿನಿತ್ಯ ಪ್ರಸಾರಗೊಳ್ಳಲಿದ್ದು, ಹೊಸ ಟ್ರೆಂಡ್ ಸೃಷ್ಟಿ ಮಾಡಲಿದೆ ಎಂಬುದು ಝೀ ಕನ್ನಡ ವಾಹಿನಿಯ ದೃಢ ನಂಬಿಕೆ.

ನಿಗೂಢ ರಾತ್ರಿ ಧಾರಾವಾಹಿಯನ್ನು ಜೋನಿ ಫಿಲ್ಮ್ಸ್ ಸಂಸ್ಥೆಯೂ ನಿರ್ಮಿಸುತ್ತಿದ್ದು ಕಿರುತೆರೆಯ ಮತ್ತು ರಂಗ ಭೂಮಿಯ ಹಲವಾರು ಹೆಸರಾಂತ ಕಲಾವಿದರು ಹಾಗು ತಂತ್ರಜ್ಞರು ಈ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಹಲವು ಹಾಸ್ಯ ಧಾರಾವಾಹಿಗಳನ್ನು ನಿರ್ದೇಶಿಸಿ ಈಗ ಝೀ ಕನ್ನಡ ವಾಹಿನಿಯ ಡ್ರಾಮಾ ಜೂನಿರ್ಯಸ್ ಮತ್ತು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಮನೆ ಮಗನಂತಾಗಿರುವ, ನಗೆಮಾಸ್ಟರ್, ಶ್ರೀ ಮಾಸ್ಟರ್ ಆನಂದ್ ಮೊದಲನೆ ಬಾರಿಗೆ ಸಸ್ಪೆನ್ಸ್‌ ಥ್ರಿಲ್ಲರ್‌ ಧಾರಾವಾಹಿಯ ನಿರ್ದೇಶನವನ್ನು ಮಾಡುತ್ತಿದ್ದಾರೆ.

ಜುಲೈ 17ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ಕ್ಕೆ “ನಿಗೂಢ ರಾತ್ರಿ” ಪ್ರಸಾರವಾಗಲಿದೆ

4 thoughts on “ಝೀ ಕನ್ನಡದ ‘ನಿಗೂಢ ರಾತ್ರಿ’ಯಲ್ಲಿ ವಿಚಿತ್ರ ಘಟನೆಗಳ ಕಥಾನಕ !

 • October 18, 2017 at 3:35 PM
  Permalink

  You could definitely see your enthusiasm within the paintings you write. The world hopes for more passionate writers such as you who aren’t afraid to mention how they believe. Always go after your heart. “The most profound joy has more of gravity than of gaiety in it.” by Michel de Montaigne.

 • October 24, 2017 at 11:34 AM
  Permalink

  It’s actually a nice and useful piece of information. I’m glad that you shared this helpful info with us. Please keep us up to date like this. Thanks for sharing.

 • October 24, 2017 at 11:59 AM
  Permalink

  I feel this is among the most vital information for me. And i’m satisfied studying your article. However wanna statement on few common things, The website style is perfect, the articles is really nice : D. Excellent process, cheers

 • October 25, 2017 at 10:15 AM
  Permalink

  Thank you for all of your hard work on this website. My daughter delights in carrying out research and it is easy to understand why. My spouse and i learn all concerning the powerful form you convey invaluable ideas via this blog and therefore invigorate participation from other individuals about this issue plus my princess is undoubtedly starting to learn a whole lot. Take advantage of the rest of the new year. You have been performing a stunning job.

Comments are closed.