ಸಿಪಿಎಂ, ಬಿಜೆಪಿ ಕಾರ್ಯಕರ್ತರ ಸಂಘರ್ಷ : ಬಿಜೆಪಿ, ಆರ್‍ಎಸ್‍ಎಸ್‍ ಕಚೇರಿಗೆ ಬೆಂಕಿ

ಕಣ್ಣೂರು ಜಿಲ್ಲೆಯ ಪಯ್ಯಣ್ಣೂರಿನಲ್ಲಿ ಆರ್‌ಎಸ್‌ಎಸ್‌‌ ಹಾಗೂ ಬಿಜೆಪಿ ಕಚೇರಿಗೆ ಮಂಗಳವಾರ ಬೆಂಕಿ ಹಚ್ಚಲಾಗಿತ್ತು. ಈ ಕೃತ್ಯದಿಂದಾಗಿ ಬಿಜೆಪಿ ಕಚೇರಿ ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಕೃತ್ಯ ನಡೆದ ಸಂದರ್ಭದಲ್ಲಿ ಕಚೇರಿಯೊಳಗೆ ಯಾರೂ ಇರಲಿಲ್ಲ. ಈ ಬಗ್ಗೆ ಬಿಜೆಪಿ, ಇದು ಸಿಪಿಎಂ ಕಾರ್ಯಕರ್ತರ ಕೃತ್ಯ ಎಂದು ಆರೋಪಿಸಿದೆ.
ಕಳೆದ  ವರ್ಷ ಹತ್ಯೆಯಾಗಿದ್ದ ಧನ್‍ರಾಜ್‍ನ  ಪುಣ್ಯಸ್ಮರಣೆಯ ಅಂಗವಾಗಿ ಸಿಪಿಎಂ ಕಾರ್ಯಕರ್ತರು ಬೈಕ್‍ ಜಾಥಾ ನಡೆಸುತ್ತಿದ್ದರು. ಈ ವೇಳೆ ಜಾಥಾ ನಡೆಯುತ್ತಿದ್ದ ಜಾಗದಲ್ಲಿ ಮೂರು ನಾಡಬಾಂಬ್‍ ಎಸೆಯಲಾಗಿದೆ. ಈ ಕೃತ್ಯದಲ್ಲಿ ನಾಲ್ವರು ಸಿಪಿಐಎಂ ಕಾರ್ಯಕರ್ತರು ಗಾಯಗೊಂಡಿದ್ದು, ಇದರಲ್ಲಿ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಸಿಪಿಐಎಂ ಆರೋಪಿಸಿದೆ.
 ಎರಡೂ ಘಟನೆಗಳು ಕೆಲ ಗಂಟೆಗಳ ಅಂತರದಲ್ಲಿ ನಡೆದಿದ್ವೆದು, ಘಟನೆಗಳ ಸಂಬಂಧ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ರುದು, ವಿಚಾರಣೆ ನಡೆಸಿದ್ದಾರೆ.

Comments are closed.