ಟೀಂ ಇಂಡಿಯಾ ಕೋಚ್ ಹುದ್ದೆಗೆ ಇನ್ನೂ ಯಾರನ್ನೂ ಆಯ್ಕೆ ಮಾಡಿಲ್ಲ : BCCI

ಮುಂಬೈ : ಭಾರತೀಯ ಕ್ರಿಕೆಟ್‌ ತಂಡಕ್ಕೆ ಕೋಚ್‌ ಆಗಿ ಇನ್ನೂ ಯಾರನ್ನೂ ಆಯ್ಕೆ ಮಾಡಿಲ್ಲ ಎಂದು ಬಿಸಿಸಿಐ ಹೇಳಿದೆ. ಇನ್ನೂ ಕೋಚ್‌ ಆಯ್ಕೆ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದು, ಸದ್ಯದಲ್ಲೇ ಕೋಚ್‌ ಯಾರೆಂಬುದರ ಕುರಿತು ಮಾಹಿತಿ ನೀಡುವುದಾಗಿ ಹೇಳಿದೆ.

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿಯವರನ್ನು ಆಯ್ಕೆ ಮಾಡಿರುವುದಾಗಿ ಭಾರತೀಯ ಕ್ರಿಕೆಟ್ ಸಂಸ್ಥೆ BCCI  ಹೇಳಿದೆ ಎಂದು ಮೂಲಗಳಿಂದ ತಿಳಿದುಬಂದಿತ್ತು. ಆದರೆ ಈ ವರದಿಯನ್ನು ಬಿಸಿಸಿಐ ತಳ್ಳಿ ಹಾಕಿದೆ. 2019ರಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯವರೆಗೆ ರವಿಶಾಸ್ತ್ರಿ ಅವರು ಕೋಚ್ ಆಗಿರಲಿದ್ದಾರೆ ಎಂದು ಮೂಲಗಳು ಹೇಳಿದ್ದವು.

ಭಾರತ ಕ್ರಿಕೆಟ್‌ ತಂಡಕ್ಕೆ ಕೋಚ್‌ ಆಯ್ಕೆ ಕುರಿತಂತೆ ನಾಯಕ ವಿರಾಟ್‌ ಕೊಹ್ಲಿ ಅವರ ಜೊತೆ ಮಾತನಾಡಿ ನಂತರ ನಿರ್ಧಾರ ಕೈಗೊಳ್ಳುವುದಾಗಿ ಇಂಡಿಯನ್‌ ಕ್ರಿಕೆಟ್‌ ಬೋರ್ಡ್‌ನ ಕ್ರಿಕೆಟ್‌ ಸಲಹಾ ಸಮಿತಿ ನಿರ್ಧಾರ ಮಾಡಿತ್ತು. ಈ ಕುರಿತು ಸಮಿತಿಯ ಸದಸ್ಯ ಹಾಗೂ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ  ಮುಂಬೈನಲ್ಲಿ ಘೋಷಿಸಿದ್ದಾರು.

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ರವಿಶಾಸ್ತ್ರಿ ಅರ್ಜಿ ಸಲ್ಲಿಸಿದ್ದರು. ಇದರ ಜೊತೆಗೆ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಆರಂಭಿಕ ಆಟಗಾರ ಫಿಲ್‌ ಸಿಮನ್ಸ್‌, ವೀರೇಂದ್ರ ಸೆಹ್ವಾಗ್‌, ಟಾಮ್‌ ಮೂಡಿ, ವೆಂಕಟೇಶ್‌ ಪ್ರಸಾದ್‌, ರಿಚರ್ಡ್‌ ಪೈಬಸ್‌, ದೊಡ್ಡ ಗಣೇಶ್‌ ಮತ್ತು ಲಾಲ್‌ಚಂದ್‌ ರಜಪೂತ್‌ ಅವರೂ ಈಗಾಗಲೇ ಅರ್ಜಿ ಸಲ್ಲಿಸಿದ್ದರು.

2 thoughts on “ಟೀಂ ಇಂಡಿಯಾ ಕೋಚ್ ಹುದ್ದೆಗೆ ಇನ್ನೂ ಯಾರನ್ನೂ ಆಯ್ಕೆ ಮಾಡಿಲ್ಲ : BCCI

  • October 24, 2017 at 12:24 PM
    Permalink

    I do love the manner in which you have framed this specific challenge plus it does supply me a lot of fodder for thought. However, through everything that I have seen, I just simply hope when the opinions stack on that men and women stay on issue and not embark upon a tirade of the news du jour. Anyway, thank you for this excellent piece and even though I can not agree with the idea in totality, I value your point of view.

  • October 24, 2017 at 1:19 PM
    Permalink

    I was just searching for this information for a while. After 6 hours of continuous Googleing, finally I got it in your website. I wonder what’s the lack of Google strategy that do not rank this type of informative websites in top of the list. Generally the top sites are full of garbage.

Comments are closed.

Social Media Auto Publish Powered By : XYZScripts.com