ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ PSI ಹುದ್ದೆಗೆ ಜುಲೈ 25, 2017ರೊಳಗೆ ಅರ್ಜಿ ಹಾಕಿ…

ಬೆಂಗಳೂರು, ಜುಲೈ 10: ಕರ್ನಾಟಕ ರಾಜ್ಯ ಪೊಲೀಸ್ (ಏSP) ಇಲಾಖೆಯಲ್ಲಿ ಖಾಲಿ ಇರುವ ಪಿಎಸ್ ಐ(ವೈರ್ ಲೆಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಜುಲೈ 25, 2017ರೊಳಗೆ ಅರ್ಜಿ ಹಾಕಬಹುದು.  ಅಭ್ಯರ್ಥಿಯ ವಯೋಮಿತಿ 21 ರಿಂದ 26 ವರ್ಷ ವಯಸ್ಸಿನೊಳಗಿರಬೇಕು. ಅಭ್ಯರ್ಥಿಗಳು 25-07-1991 ಹಾಗೂ 25-07-1996 ದಿನಾಂಕದೊಳಗೆ ಜನಿಸಿರಬೇಕು.

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಪದವಿ ಪಡೆದಿರಬೇಕು. ವಿಜ್ಞಾನ ವಿಷಯದಲ್ಲಿ ಜೀವಶಾಸ್ತ್ರ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ವಿಧಿವಿಜ್ಞಾನ ಶಾಸ್ತ್ರ, ಕ್ರಿಮಿನಾಲಜಿ, ಬಯೋ ಕೆಮಿಸ್ಟ್ರಿ, ಸೆಲ್ ಬಯೋಲಜಿ, ಮೈಕ್ರೋ ಬಯೋಲಜಿ, ಕಂಪ್ಯೂಟರ್ ಸೈನ್ಸ್ ಗಳನ್ನು ಅಭ್ಯಸಿರಬೇಕು. ನೇಮಕಾತ್ರಿ ಪ್ರಕ್ರಿಯೆ: ಪ್ರವೇಶ ಪರೀಕ್ಷೆ, ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಎದುರಿಸಬೇಕು. ಮುಖ್ಯ ದಿನಾಂಕಗಳು: ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-07-2017 ಅರ್ಜಿ ಶುಲ್ಕ ಪಾವತಿಗೆ 26-07-2017 ಹೆಚ್ಚಿನ ವಿವರಗಳನ್ನು ಈ ಲಿಂಕ್ ನಲ್ಲಿ ಪಡೆದುಕೊಳ್ಳಿ.

 

 

Comments are closed.