En suddi exclusive: “ನನ್ನ ಹಾಡು ನನ್ನದು” ಸಿನಿಮಾದ ಮೊದಲ ಟೀಸರ್‌ ರಿಲೀಸ್‌

ಬೆಂಗಳೂರು:  ವಾಸ್ತವ ಜಗತ್ತಿಗೆ ಹತ್ತಿರವಾಗುವಂತಹ, ಇಂದಿನ ಮನಸ್ಥಿತಿಯ ಜನರಿಗೆ ಇಷ್ಟವಾಗುವಂತಹ ಸಿನಿಮಾಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಹೊಸ ಚಿತ್ರವೊಂದು, ಹೊಸ ಆಶಾಕಿರಣದೊಂದಿಗೆ ಬಿಡುಗಡೆಗೆ ಸಿದ್ದವಾಗಿದೆ. ಮಾರ್ಕ್ಸ್ ವಾದಿ ನಾಯಕ ಚೆಗುವಾರ ಅವರ “ಮೋಟರ್‌ ಸೈಕಲ್‌ ಡೈರಿ” ಎಂಬ ಸಿನಿಮಾದಿಂದ ಸ್ಫೂರ್ತಿ ಪಡೆದು, ಕನ್ನಡ ನೆಲದ ಮಣ್ಣಿನ ಸೊಗಡಿಗೆ ಅನುಗುಣವಾಗಿ, “ನನ್ನ ಹಾಡು ನನ್ನದು” ಸಿನಿಮಾ ತೆರೆ ಕಾಣಲು ಸಿದ್ಧವಾಗುತ್ತಿದೆ. ಬಾಹುಬಲಿ ಖ್ಯಾತಿಯ ಸಿನಿಮಾ ನಿರ್ದೇಶಕ ರಾಜಮೌಳಿ, ರಾಘವ ಲಾರೆನ್ಸ್‌ರಂತಹ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಪಳಗಿರುವ ಪುನೀತ್‌ ಶರ್ಮನ್‌ ಎಂಬ ಭರವಸೆಯ ನಿರ್ದೇಶಕರು ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಈ ಹಿಂದೆ ಶರಾವತಿ ತೀರದಲ್ಲಿ ಎಂಬ ಸಿನಿಮಾದ  ಸಹನಿರ್ಮಾಪಕರಾಗಿದ್ದ ರಮೇಶ್‌ ಬಾಬು, ಈ ಬಾರಿ ಆರ್‌ ಆರ್‌ ಮೂವೀಸ್‌ ಬ್ಯಾನರ್‌ನಡಿ ಮೂಡಿಬರುತ್ತಿರುವ ನನ್ನ ಹಾಡು ನನ್ನದು ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ.  ಈ ಸಿನಿಮಾದ ಶೇ.70ರಷ್ಟು ಭಾಗ ಪ್ರಯಾಣದಲ್ಲಿ ಕಳೆದಿದ್ದು, ಇದರಲ್ಲಿ 60ರ ದಶಕದ ಲ್ಯಾಂಬ್ರೆಟಾ ಸ್ಕೂಟರ್‌ ಮಹತ್ವ ಪಡೆದಿದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಹುಡುಗನೊಬ್ಬ ಸದಾ ಓದುವುದು, ಕವನಗಳನ್ನು ಬರೆಯುವುದಲ್ಲೇ ತೊಡಗಿಕೊಂಡಿರುತ್ತಾನೆ.

ಆತ ಪ್ರಪಂಚದ ಅರಿವೇ ಇಲ್ಲದೆ ಕೇವಲ ಓದಿನಲ್ಲೇ ಮುಳುಗಿರುವುದನ್ನು ನೋಡಿದ ಪೋಷಕರಿಗೆ ಈತನ ಬಗ್ಗೆ ಭಯ ಕಾಡಲು ಪ್ರಾರಂಭವಾಗುತ್ತದೆ. ಆತನಿಗೆ ಪ್ರಪಂಚದ ಬಗ್ಗೆ ತಿಳಿದುಕೊಳ್ಳುವಂತೆ ಒತ್ತಡ ಹೇರುತ್ತಾರೆ. ಇದೆಲ್ಲದರಿಂದ ಬೇಸತ್ತ ಹುಡುಗ,60ರ ದಶಕದ ಲ್ಯಾಂಬ್ರೆಟಾ ಸ್ಕೂಟರ್‌ನೊಂದಿಗೆ ಪ್ರಯಾಣ ಆರಂಭಿಸುತ್ತಾನೆ. ಪ್ರಯಾಣದ ವೇಳೆ ಅನೇಕ ರೀತಿಯ ಜನರನ್ನು ಭೇಟಿಯಾಗಿ ವಿಶೇಷ ಅನುಭವಗಳನ್ನು ಪಡೆಯುತ್ತಾನೆ. ನಂತರ ಪುಸ್ತಕದ ಜ್ಞಾನವೇ ಬೇರೆ, ಪ್ರಪಂಚ ಇರುವುದೇ ಬೇರೆಯ ರೀತಿ ಎಂಬುದನ್ನು ಅರಿತು, ತನ್ನ ಜಟಿಲವಾದ ಪ್ರಶ್ನೆಗೆ ಸರಳ ಉತ್ತರವನ್ನು ಕಂಡುಕೊಳ್ಳುವುದೇ ಚಿತ್ರದ ಕಥಾ ಹಂದರ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು,  ಸ್ವಾಮಿ ಈ ಚಿತ್ರಕ್ಕೆ ಅದ್ಭುತವಾದ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಭಿರಾಂ, ದತ್ತಣ್ಣ, ಕೀರ್ತಿ, ಸುಪ್ರಿಯಾ, ಕರಿಸುಬ್ಬು ತನಿಕೆಲ್ಲ ಭರಿಣಿ, ಹನುಮಂತ,ಗೋಪಿ ಮುಂತಾದವರು ನಟಿಸಿದ್ದಾರೆ.

ನಿಮ್ಮೆಲ್ಲರಿಗಾಗಿ ನನ್ನ ಹಾಡು ನನ್ನದು ಸಿನಿಮಾದ ಫಸ್ಟ್‌ ಟೀಸರ್‌ ಇಲ್ಲಿದೆ.

5 thoughts on “En suddi exclusive: “ನನ್ನ ಹಾಡು ನನ್ನದು” ಸಿನಿಮಾದ ಮೊದಲ ಟೀಸರ್‌ ರಿಲೀಸ್‌

 • October 16, 2017 at 4:49 PM
  Permalink

  Very great info can be found on website . “Search others for their virtues, thyself for thy vices.” by Benjamin Franklin.

 • October 16, 2017 at 4:50 PM
  Permalink

  I am glad for commenting to make you understand what a extraordinary experience my wife’s girl went through visiting yuor web blog. She came to understand plenty of things, which included what it’s like to have an incredible giving mindset to get other folks smoothly fully grasp certain extremely tough matters. You actually did more than readers’ expected results. I appreciate you for showing such necessary, dependable, educational not to mention fun tips about your topic to Julie.

 • October 24, 2017 at 11:14 AM
  Permalink

  Hi there very nice site!! Man .. Excellent .. Wonderful .. I will bookmark your site and take the feeds additionally…I am glad to find so many useful info right here within the submit, we want work out extra techniques in this regard, thank you for sharing.

Comments are closed.

Social Media Auto Publish Powered By : XYZScripts.com