Cricket T20 : ಟೀಮ್ ಇಂಡಿಯಾ ವಿರುದ್ಧ ವೆಸ್ಟ್ ಇಂಡೀಸ್ ಗೆ 9 ವಿಕೆಟ್ ಗಳ ಜಯ…

ಕಿಂಗ್ಸ್ ಟನ್ (ಜಮೈಕಾ) : ವೆಸ್ಟ್ ಇಂಡೀಸ್ ವಿರುದ್ಧದ ಏಕೈಕ ಟಿ20ಐ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 190/6 ಸ್ಕೋರ್ ಗಳಿಸಿತು. .ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ವಿಂಡೀಸ್ ಪಡೆ, ಎವಿನ್ ಲೆವಿಸ್ ರ ಆಕರ್ಷಕ ಶತಕದ ನೇರವಿನಿಂದ ಕೇವಲ ಒಂದು ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು.  ಕ್ರಿಸ್ ಗೇಲ್ 18ರನ್ ಮಾತ್ರ ಗಳಿಸಿ ಔಟಾದರು.  ಆರಂಭದಿಂದಲೇ ಭರ್ಜರಿ ಪ್ರದರ್ಶನ ನೀಡಿದ ಎವಿನ್ ಲೆವಿಸ್  62 ಎಸೆತಗಳಲ್ಲಿ 125ರನ್ ಗಳಿಸಿ ಅಜೇಯರಾಗಿ ಉಳಿದು ಜಯ ತಂದಿತ್ತರು.  ಲೆವಿಸ್ ಅವರು 6 ಬೌಂಡರಿ ಹಾಗೂ 12 ಸಿಕ್ಸರ್ ಸಿಡಿಸಿ ತಮ್ಮ ಎರಡನೇ ಟಿ20 ಶತಕ ಗಳಿಸಿದರು. ಎರಡು ಶತಕಗಳನ್ನು ಭಾರತದ ವಿರುದ್ಧವೇ ಗಳಿಸಿದ್ದಾರೆ . ಇವರಿಗೆ ಮರ್ಲಾನ್ ಸ್ಯಾಮಿಯಲ್ಸ್ ಸಾಥ್ ನೀಡಿದರು. ಸ್ಯಾಮಿಯಲ್ಸ್  29 ಎಸೆತಗಳಲ್ಲಿ 39ರನ್ ಗಳಿಸಿ ನಾಟೌಟ್ ಆಗಿ ಉಳಿದು ಜಯದ ಗಡಿ ದಾಟಿಸಿದರು.


ಇದಕ್ಕು ಮೊದಲು ಟಾಸ್ ಸೋತು  ಮೊದಲ ಬ್ಯಾಟಿಂಗ್ ಗೆ  ಇಳಿದ ಟೀಂ ಇಂಡಿಯಾ ಪರ ಶಿಖರ್ ಧವನ್ ಜತೆ ನಾಯಕ ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದರು.  ವಿರಾಟ್ ಕೊಹ್ಲಿ 22 ಎಸೆತಗಳಲ್ಲಿ 39ರನ್ ಹಾಗೂ ಧವನ್ 12 ಎಸೆತಗಳಲ್ಲಿ 23 ರನ್ ಗಳಿಸಿ ಉತ್ತಮ ಆರಂಭ ನೀಡಿದರು.  ರಿಷಬ್ ಪಂತ್ 35 ಎಸೆತಗಳಲ್ಲಿ 38ರನ್ ಗಳಿಸಿ, ದಿನೇಶ್ ಕಾರ್ತಿಕ್ ಜತೆಗೂಡಿ ರನ್ ಗತಿ ಹೆಚ್ಚಿಸಿದರು.  ದಿನೇಶ್ ಕಾರ್ತಿಕ್ 29 ಎಸೆತಗಳಲ್ಲಿ 48ರನ್ ಗಳಿಸಿ 16ನೇ ಓವರ್ ನಲ್ಲಿ ಔಟಾದರು. ವೆಸ್ಟ್ ಇಂಡೀಸ್ ಪರ ಟೇಲರ್, ವಿಲಿಯಮ್ಸ್ ತಲಾ 2 ಹಾಗೂ ಸ್ಯಾಮುಯಲ್ಸ್ 1 ವಿಕೆಟ್ ಪಡೆದರು.

ವೆಸ್ಟ್ ಇಂಡೀಸ್ ವಿರುದ್ಧದ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯನ್ನು ಪ್ರವಾಸಿ ಟೀಂ ಇಂಡಿಯಾ 3-1ರಲ್ಲಿ ಗೆದ್ದುಕೊಂಡಿದೆ. ಏಕೈಕ ಟಿ20ಐ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಅವಕಾಶ ಪಡೆದುಕೊಂಡಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಕಾರ್ಲೊಸ್ ಬ್ರಥ್ ವೈಟ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

2 thoughts on “Cricket T20 : ಟೀಮ್ ಇಂಡಿಯಾ ವಿರುದ್ಧ ವೆಸ್ಟ್ ಇಂಡೀಸ್ ಗೆ 9 ವಿಕೆಟ್ ಗಳ ಜಯ…

  • October 24, 2017 at 8:41 PM
    Permalink

    I’m impressed, I need to say. Actually not often do I encounter a blog that’s both educative and entertaining, and let me tell you, you’ve got hit the nail on the head. Your concept is excellent; the difficulty is something that not enough individuals are talking intelligently about. I’m very pleased that I stumbled throughout this in my seek for one thing relating to this.
    love compatibility based on birthdate http://www.youtube.com/watch?v=RoR0R1pXgOA

Comments are closed.

Social Media Auto Publish Powered By : XYZScripts.com