ಬಳ್ಳಾರಿಯಲ್ಲಿ ಆರು ಜನ ಗಾಂಜಾ ಮಾರಾಟ ಮತ್ತು ಖರೀದಿದಾರರ ಬಂಧನ

ಬಳ್ಳಾರಿ: ತಾಲೂಕಿನ ಕುರುಗೋಡು ಪಟ್ಟಣದಲ್ಲಿ  ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮತ್ತು ಅದನ್ನು ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರು ಜನರನ್ನು ಪೊಲೀಸರು ಬಂಧಿಸಿ, ಒಂದು ಕಿಲೋ 150 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕುರುಗೋಡಿನಲ್ಲಿ ಮೂರು ಬೈಕ್ ಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಕುರುಗೋಡಿನ ಬಸವರಾಜ್ ಮತ್ತು ಆಂದ್ರ ಪ್ರದೇಶದ ಹೊಳಗುಂದ ಬಳಿಯ ಒಂದುವಾಗಲಿ ಗ್ರಾಮದ ಬಸೆಟ್ಟಿ  ಗಾಂಜ ಬೆಳೆದ ರೈತರಿಂದ ಖರೀದಿ ಮಾಡಿ, ಅದನ್ನು ಬಳ್ಳಾರಿಯಲ್ಲಿ ಮಾರಾಟ ಮಾಡುವ ಜನರಿಗೆ ಮಾರುತ್ತಿದ್ದರು.

ಪ್ರಕರಣದಲ್ಲಿ ಬಂಧಿಸಿರುವ ಆರು ಜನ ಆರೋಪಿಗಳಲ್ಲಿ ಪಾಲಿಕೆ ಸದಸ್ಯೆಯ ಮಗನೂ ಇದ್ದಾನೆ ಎಂದು ತಿಳಿದು ಬಂದಿದೆ.
ಬಳ್ಳಾರಿ ಪಾಲಿಕೆ ಸದಸ್ಯೆ ದಿವ್ಯಕುಮಾರಿ ಅವರ ಮಗ ದೀಪಕ್ ಚೌದರಿ ಸೇರಿದಂತೆ ಪುರುಷೋತ್ತಮ, ರಾಮು, ಶಬರಿ. ಕೊಟ್ರೇಶ್, ರಘು ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕುರುಗೋಡು ಪಿಎಸ್ಐ ವಸಿಗೇರಪ್ಪ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

 

Comments are closed.

Social Media Auto Publish Powered By : XYZScripts.com