ಬಿಸಿಯೂಟದಲ್ಲಿ ಬಾಲಹುಳು: ಅಸ್ವಸ್ಥರಾದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಬಾಗಲಕೋಟೆ: ಬಾಲಹುಳು ಬಿದ್ದ ಕಲುಷಿತ ಆಹಾರ ಸೇವನೆ ಹಿನ್ನೆಲೆಯಲ್ಲಿ 30 ವಿದ್ಯಾರ್ಥಿಗಳು  ಅಸ್ವಸ್ಥರಾಗಿರುವ ಘಟನೆ ಬಾಗಲಕೋಟೆಯ ಹುನಗುಂದ ತಾಲ್ಲೂಕಿನ ಗಂಗೂರಿನಲ್ಲಿ ನಡೆದಿದೆ. ಮದ್ಯಾಹ್ನ ಬಿಸಿಯೂಟ ಸೇವಿಸಿದ ಮಕ್ಕಳು ವಾಂತಿ, ಹೊಟ್ಟೆನೋವಿನಿಂದ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳನ್ನು ಹುನಗುಂದ ಹಾಗೂ ಅಮೀನಗಢ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಅಕ್ಷರ ದಾಸೋಹ ಅಧಿಕಾರಿ ಎಂ.ಬಿ ಗಂಜಿಹಾಳ ಭೇಟಿ ನೀಡಿ ಪರಶೀಲನೆ ನಡೆಸುತ್ತಿದ್ದಾರೆ.

Comments are closed.

Social Media Auto Publish Powered By : XYZScripts.com