ಡೆಂಘೀ ಕಾಯಿಲೆಯಿಂದ ಸಿ.ಆರ್.ಪಿ.ಎಫ್ ಯೋಧ ಮಂಜುನಾಥ ಮೇತ್ರಿ ಸಾವು

ಬಾಗಲಕೋಟೆ ಡೆಂಘಿ ಕಾಯಿಲೆಯಿಂದ ಬಳಲುತ್ತಿದ್ದ ಸಿ.ಆರ್.ಪಿ.ಎಫ್. ಯೋಧ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆ ಚಿಮ್ಮಡ ಗ್ರಾಮದ ಯೋಧ ಮಂಜುನಾಥ ಮೇತ್ರಿ (30) ದೆಹಲಿಯ ಶಾಂತಿ ಮುಕ್ಕುಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಕಳೆದ ೮ ವಷ೯ಗಳಿಂದ ಜಮ್ಮು ಕಾಶ್ಮೀರದಲ್ಲಿ ಸಿ.ಆರ್. ಪಿ.ಎಫ್. ನ 28ನೇ ಬಟಾಲಿಯನ್ ದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತ ಯೋಧನ ಪಾಥಿ೯ವ ಶರೀರ ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಲಿದೆ. ಬಳಿಕ ಮೃತದೇಹವನ್ನು ಬೆಳಗಾವಿಯಿಂದ ಬಾಗಲಕೋಟೆ ಜಿಲ್ಲೆಯ ಚಿಮ್ಮಡಕ್ಕೆ ತಂದು ಅಂತ್ಯಕ್ರಿಯೆ ಕುಟುಂಬಸ್ಥರು ನಡೆಸಲಿದ್ದಾರೆ.

Comments are closed.