ಬೆಂಗಳೂರು : ಮೊಬೈಲ್ ಕದ್ದು ಹುಸಿ ಬಾಂಬ್ ಕರೆ ಮಾಡಿದ್ದ ಮೂವರ ಬಂಧನ..!

ಬೆಂಗಳೂರು : ಕದ್ದ ಮೊಬೈಲ್ ನಿಂದ ಹುಸಿ ಬಾಂಬ್ ಕರೆ ಮಾಡಿದ್ದ ಮೂವರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಬಾಬಾ, ಜಾಕೀರ್ ಹಾಗೂ ಖಾಜಾ ಬಂಧಿತ ಆರೋಪಿಗಳು. ಇದೇ ತಿಂಗಳ 7 ರಂದು ಪೊಲಿಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದ ಆರೋಪಿಗಳು ಹೊಸಕೋಟೆ ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಕಾಗೂ ಸಿಮ್ ಕಳ್ಳತನ ಮಾಡಿದ್ದರು. ಕದ್ದ ಮೊಬೈಲ್ ಮತ್ತು ಸಿಮ್ ನಿಂದ ಆರೋಪಿಗಳು ಹುಸಿ ಬಾಂಬ್ ಕರೆ ಮಾಡಿದ್ದರು. ಇದೀಗ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಮೊಬೈಲ್ ಹಾಗೂ ಸಿಮ್ ಕಾರ್ಡ ಅನ್ನು ವಶಪಡಿಸಿಕೊಳ್ಳಲಾಗಿದೆ.

Comments are closed.