ಆರ್‍ಎಸ್‍ಎಸ್‍ ಕಾರ್ಯಕರ್ತ ಶರತ್‍ ಸಾವು : ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ಮಂಗಳೂರು: ಕೆಲ ದಿನಗಳ ಹಿಂದೆ ದುಷ್ಕರ್ಮಿಗಳು ನಡೆಸಿದ್ದ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ  ಆರ್‍ಎಸ್‍ಎಸ್‍ ಕಾರ್ಯಕರ್ತ ಶರತ್‍ ಮಡಿವಾಳ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಶರತ್‍ ಮಡಿವಾಳ (28) ಪಾರ್ಥಿವ ಶರೀರವನ್ನು ಸ್ವಗೃಹ ಬಿ.ಸಿ.ರೋಡಿಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲದೇ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‍ ಬಂದೋಬಸ್ತ್‍ ಮಾಡಲಾಗಿದೆ. ಹಿಂದೂಪರ ಸಂಘಟನೆ ಕಾರ್ಯಕರ್ತರು ಶರತ್‍ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ.

ಶರತ್ ಮಡಿವಾಳ ಸಜಿಪಮೂಡ ಗ್ರಾಮದ ಕಂದೂರು ನಿವಾಸಿಯಾಗಿದ್ದರು. ಕಳೆದ ಮಂಗಳವಾರ ರಾತ್ರಿ ಬಿ.ಸಿ.ರೋಡ್‌‌ನಲ್ಲಿರುವ ಉದಯ ಲ್ಯಾಂಡ್ರಿಯಲ್ಲಿ ಶರತ್‌ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಇದರಿಂದ ತೀವ್ರ ಗಾಯಗೊಂಡಿದ್ದ ಶರತ್‌ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶರತ್ ಪಾರ್ಥಿವ ಶರೀರವನ್ನು ಇಂದು ಬಿ.ಸಿ. ರೋಡ್‌‌ನಲ್ಲಿ ಮೆರವಣಿಗೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

 

Comments are closed.

Social Media Auto Publish Powered By : XYZScripts.com