ಪೊಲೀಸರೇ ನಿಮಗೆ ತಾಕತ್‌ ಇದ್ರೆ ನಮ್ಮನ್ನು ಹಿಡೀರಿ ನೋಡೋಣ ….

ಬೆಂಗಳೂರು: ತಾಖತ್ ಇದ್ರೆ ಹಿಡಿಯಿರಿ ಎಂದು ಪೊಲೀಸರಿಗೆ ಸವಾಲ್ ಹಾಕಿದ್ದ ಯುವಕರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.  ಜುಲೈ 4ರಂದು ಜಯನಗರದ 9ನೇ ಬ್ಲಾಕ್‌ನಲ್ಲಿ ಮೂವರು ಯುವಕರು ಹೆಲ್ಮೆಟ್‌ ಹಾಕದೆ ಮನಬಂದಂತೆ ಬೈಕ್‌ ಚಲಾಯಿಸುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಅವರನ್ನು ಹಿಡಿಯಲು ಮುಂದಾಗಿದ್ದರು. ಆಗ ಯುವಕರು ಪೊಲೀಸರಿಗೆ ಬಾಯಿಗೆ ಬಂದಂತೆ ಬೈದು, ತಾಕತ್ತಿದ್ದರೆ ನಮ್ಮನ್ನು ಹಿಡಿಯಿರಿ ಎಂದು ಸವಾಲು ಹಾಕಿದ್ದರು. ತಕ್ಷಣ ಪೊಲೀಸರು ಅವರನ್ನು ಚೇಸ್‌ ಮಾಡಿ ಹಿಡಿದಿದ್ದರು. ಆದರೆ ಕೆಲ ಸ್ಥಳೀಯರು ಯುವಕರ ಪರ ವಹಿಸಿಕೊಂಡು ಪೊಲೀಸರನ್ನು ನಿಂದಿಸಿದ್ದಾರೆ. ಈ ವೇಳೆ ಯುವಕರಿಬ್ಬರು ಪರಾರಿಯಾಗಿದ್ದಾರೆ. ಓರ್ವ ಯುವಕನನ್ನು ಹಿಡಿದು ನಂತರ ಆತನಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

 

Comments are closed.