ಮೈಸೂರು : ಸಾಲ ಬಾಧೆ ತಾಳದೆ ವಿಷ ಸೇವಿಸಿದ್ದ ರೈತ ಮಹಿಳೆ ಸಾವು

ಮೈಸೂರು : ಸಾಲ ಬಾಧೆ ತಾಳಲಾರದೇ ವಿಷ ಸೇವಿಸಿ ಅಸ್ವಸ್ತಳಾಗಿದ್ದ ರೈತ ಮಹಿಳೆ ಸಾವನ್ನಪ್ಪಿದ್ಧಾರೆ. ಎಚ್.ಡಿ.ಕೋಟೆ ತಾಲೂಕಿನ ಕಾರಪುರ ಗ್ರಾಮದ ನಿವಾಸಿ ನಿಂಗಮ್ಮ(೬೩) ಮೃತ ವೃದ್ಧೆ. ಮಹಿಳಾ ಸ್ವಸಹಾಯ ಸಂಘದಲ್ಲಿ 60 ಸಾವಿರ, ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 16 ಸಾವಿರ, VSSN ಅಂತರಸಂತೆ ಬ್ಯಾಂಕ್ ನಲ್ಲಿ 70 ಸಾವಿರ ಸಾಲ ಮಾಡಿಕೊಂಡಿದ್ದರು.

 

ಸಾಲ ತೀರಿಸಲು ಸಾಧ್ಯವಾಗದ ಕಾರಣ ಜಮೀನಿನಲ್ಲಿ ವಿಷ ಸೇವಿಸಿ ಒದ್ದಾಡುತ್ತಿದ್ದ ನಿಂಗಮ್ಮ ಅವರನ್ನು ಅಕ್ಕಪಕ್ಕದ ಜಮೀನಿನವರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.

Social Media Auto Publish Powered By : XYZScripts.com