ನಾನು ಮಿಂಗಲ್ ಆಗದೆ ಸಿಂಗಲ್‌ ಆಗಿರಲು ಈ ನಟನೇ ಕಾರಣ : ಟಬು

ತಮ್ಮ ಅಭಿನಯದ ಮೂಲಕ ಸಿನಿ ರಸಿಕರ ಮನಗೆದ್ದಿರುವ ಚೆಲುವೆ ಟಬು. 45 ವರ್ಷ ವಯಸ್ಸಿನ ಈಕೆ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ಗೆ ನೀಡಿರುವ ಯೂಸರ್‌ ನೇಮ್‌ ಟಬ್ಯೂಟಿಫುಲ್‌. ಅವರ ಯೂಸರ್‌ನೇಮ್‌ನಂತೆ ಟಬು ಸೌಂದರ್ಯವನ್ನ ಬಾಲಿವುಡ್‌ ಒಪ್ಪಿಕೊಂಡಿತ್ತು ಕೂಡ. ಇಂಥ ಪ್ರತಿಭಾವಂತ ಸುಂದರಿ ಇಂದಿಗೂ ಯಾರನ್ನೂ ಮದುವೆಯಾಗದೇ ಒಂಟಿ ಜೀವನ ನಡೆಸುತ್ತಿರುವುದರ ಬಗ್ಗೆ ಬಾಲಿವುಡ್‌ ಜಗತ್ತು ತಲೆಕೆಡಿಸಿಕೊಂಡಿರಲಿಲ್ಲ.
 ಕಾಂಟ್ರವರ್ಸಿಗಳಿಂದ ಸುದ್ದಿಯಾಗದೇ ತಮ್ಮ ಪಾಡಿಗೆ ತಾವಿರುವ ಟಬು ಇನ್ನೂ ಏಕೆ ಮದುವೆಯಾಗಿಲ್ಲ ಎಂಬುದನ್ನ ಸಿನಿ ಪತ್ರಕರ್ತರೂ ಕೂಡ ಪತ್ತೆ ಹಚ್ಚುವ ಸಾಹಸಕ್ಕೆ ಕೈ ಹಾಕಿರಲೇ ಇಲ್ಲ. ಆದರೆ ಸ್ವತಃ ಟಬು ಮುಂಬೈ ಮಿರರ್‌ ಪತ್ರಿಕೆಯ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ತಾವು ಇದುವರೆಗೆ ಯಾರನ್ನೂ ಮದುವೆಯಾಗದಿರಲು ಬಾಲಿವುಡ್‌ನ ಆಕ್ಷನ್‌ ಹೀರೋ ಅಜಯ್‌ ದೇವಗನ್‌ ಕಾರಣ ಎಂದಿದ್ದಾರೆ. ಗೋಲ್‌ ಮಾಲ್‌ ಅಗೇನ್‌ ಚಿತ್ರದಲ್ಲಿ ಸಹನಟರಾಗಿ ನಟಿಸುತ್ತಿರುವ ಅಜಯ್‌ ದೇವಗನ್‌ ತಮಗೆ ಸರಿಸುಮಾರು 25 ವರ್ಷಗಳಿಂದ ಗೊತ್ತಿದೆ, ತಾವಿಬ್ಬರೂ ಅತ್ಯಂತ ಆಪ್ತ ಸ್ನೇಹಿತರಾಗಿದ್ದೆವು ಎಂಬ ಸತ್ಯವನ್ನ ಟಬು ಹೊರಗೆಡವಿದ್ದಾರೆ.  ತನ್ನ ಸಂಬಂಧಿ ಸಮೀರ್‌ ಆರ್ಯ ಅವರ ಪಕ್ಕದ ಮನೆಯಲ್ಲಿಯೇ ವಾಸವಿದ್ದ ಅಜಯ್‌ ದೇವಗನ್‌ ತನ್ನ ಬಗ್ಗೆ ಗೂಢಾಚಾರಿಕೆ ನಡೆಸುತ್ತಿದ್ದರು ಮತ್ತು ತಾನು ಯಾವ ಹುಡುಗರ ಜತೆ ಮಾತನಾಡಿದರೂ ಅದನ್ನ ಪ್ರಶ್ನಿಸುತ್ತಿದ್ದರು ಎಂದು ಇತಿಹಾಸವನ್ನ ಮೆಲುಕು ಹಾಕಿದ್ದಾರೆ. ಅಲ್ಲದೆ ತಾನು ಇದುವರೆಗೂ ಏಕಾಂಗಿಯಾಗಿರುವುದಕ್ಕೆ ಅಜಯ್‌ ದೇವಗನ್‌ ಅವರೇ ಕಾರಣ ಎಂದಿದ್ದಲ್ಲದೆ, ತಾನು ಇದುವರೆಗೂ ಸಿಂಗಲ್‌ ಆಗಿಯೇ ಇದ್ದೇನೆ ಎಂಬ ಕಾರಣಕ್ಕೆ ಅಜಯ್‌ಗೆ ವಿಷಾದ, ಅನುಕಂಪವಿರಬಹುದು ಎಂದಿದ್ದಾರೆ.
ಸಮಯ ಎಲ್ಲವನ್ನೂ ಬದಲಾಯಿಸುತ್ತದೆ ಎಂಬ ಮಾತಿನಂತೆ, ಟಬು ಈಗ ಅಜಯ್‌ ದೇವಗನ್‌ ಬಳಿ ತನಗಾಗಿ ಓರ್ವ ಒಳ್ಳೆಯ ಹುಡುಗನನ್ನ ಹುಡುಕಿ ಕೊಡಲು ಬೇಡಿಕೆ ಇಟ್ಟಿದ್ದಾರಂತೆ.  ಇದನ್ನ ಅವರು ನವಿರಾಗಿ ಹಾಸ್ಯಲೇಪಿತ ಮಾತುಗಳಿಂದ ವಿವರಿಸುತ್ತಾ, ಅಜಯ್‌ ತನಗೆ ಒಳ್ಳೆಯ ಗೆಳೆಯ. ನಾವಿಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದೆವು ಎಂದು ಸಮಜಾಯಿಶಿ ನೀಡಿದ್ದಾರೆ. ಆದರೂ, ಟಬು ಜೊತೆಯಲ್ಲಿ ಅದೆಷ್ಟೋ ನಟರು ಅಭಿನಯಿಸಿದ್ದರೂ ಕೂಡ ಟಬು ಮನಸ್ಸಿಗೆ ಹತ್ತಿರವಾದವರು ಅಜಯ್‌ ಒಬ್ಬರೇ. ತಮ್ಮಿಬ್ಬರ ನಡುವೆ ವಿಶಿಷ್ಟ ಸಂಬಂಧವಿದೆ, ವಿವರಿಸಲಾಧ್ಯ ಸಂಬಂಧ ಅದು ಎಂದಿರುವ ಟಬು ಮಾತಿನಲ್ಲಿ ಅಜಯ್‌ರಿಂದ ಬೇರೆಯಾಗಿರುವ ನೋವಿದೆಯಾ..? ಎಂಬ ಅನುಮಾನ ಸಿನಿ ರಸಿಕರ ಮನಸ್ಸಿನಲ್ಲಿ ಮೂಡಿರಲೂ ಬಹುದು.
 ಟಬು ಮತ್ತು ಅಜಯ್‌ ಜೋಡಿಯಾಗಿ ನಟಿಸಿದ ಅದೆಷ್ಟೋ ಹಿಂದಿ ಚಿತ್ರಗಳು ಬಾಕ್ಸ್‌ ಆಫೀಸ್ ಹಿಟ್‌ ಆಗಿದ್ದವು.  ಅಜಯ್‌, ಟಬು ಜೋಡಿಯನ್ನ ಬಾಲಿವುಡ್‌ ಒಪ್ಪಿಕೊಂಡಿತ್ತು. ಅಜಯ್‌ , ಟಬು ಕೆಮೆಸ್ಟ್ರಿಯಲ್ಲಿ ಮೂಡಿಬಂದಿದ್ದ ‘ರುಕ್‌ ರುಕ್‌ ರುಕ್‌ ಅರೇ ಬಾಬ ರುಕ್‌’ ಹಾಡಂತೂ ಇವರಿಬ್ಬರಿಗೆ ಅತೀ ಜನಪ್ರಿಯತೆ ತಂದುಕೊಟ್ಟಿತ್ತು.  90 ರ ದಶಕದಲ್ಲಿ ಜನರ ಮನಸ್ಸು ಕದ್ದಿದ್ದ ಅದೇ ಜೋಡಿ ಮತ್ತೊಮ್ಮೆ ರೋಹಿತ್‌ ಶೆಟ್ಟಿ ನಿರ್ದೇಶನದ  ‘ಗೋಲ್‌ಮಾಲ್‌ ಅಗೇನ್‌ ’ ಮೂಲಕ  ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

3 thoughts on “ನಾನು ಮಿಂಗಲ್ ಆಗದೆ ಸಿಂಗಲ್‌ ಆಗಿರಲು ಈ ನಟನೇ ಕಾರಣ : ಟಬು

  • October 18, 2017 at 12:07 PM
    Permalink

    I want to express my thanks to this writer for bailing me out of this challenge. Because of scouting through the internet and coming across tips which are not pleasant, I assumed my entire life was done. Existing minus the strategies to the difficulties you have sorted out all through your main posting is a critical case, as well as ones that would have badly affected my career if I hadn’t come across your web page. Your own competence and kindness in playing with every item was priceless. I don’t know what I would’ve done if I had not come across such a point like this. I can also at this moment relish my future. Thanks for your time so much for the skilled and sensible guide. I won’t think twice to propose the sites to anybody who needs to have recommendations about this issue.

Comments are closed.

Social Media Auto Publish Powered By : XYZScripts.com